ಕುಂದಾಪುರ: ಉಪ್ಪಿನಕುದ್ರುವಿನ ಶಿಲ್ಪಾ (25) ಎಂಬ ಯುವತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಇವರು ಕೋಟೇಶ್ವರ ಸಮೀಪದ ಮೂಡುಗೋಪಾಡಿ ನಿವಾಸಿ ಅಜೀಜ್ (32) ಎಂಬಾತನ ಪ್ರೀತಿಗೆ ಬಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಜೀಜ್ ಹಾಗೂ ಆತನ ಪತ್ನಿ ಸಲ್ಮಾ ವಿರುದ್ಧ ಮೃತಳ ಸಹೋದರ ದೂರು ನೀಡಿದ್ದಾರೆ.
ಅಜೀಜ್ ತಲ್ಲೂರಿನ ಜವುಳಿ ಅಂಗಡಿಯಲ್ಲಿ 3 ವರ್ಷಗಳಿಂದ ಉದ್ಯೋಗಕ್ಕಿದ್ದ ಶಿಲ್ಪಾರನ್ನು ಪರಿಚಯ ಮಾಡಿಕೊಂಡು ಪ್ರೀತಿಸುತ್ತೇನೆ ಎಂದಿದ್ದ. ವಾಟ್ಸ್‌ಆ್ಯಪ್ ಮೂಲಕ ಯುವತಿಗೆ ಸಂದೇಶ ಕಳುಹಿಸಿ, ಫೋಟೋಗಳನ್ನು ಕಳುಹಿಸಿ, ಪುಸಲಾಯಿಸಿ ಕೋಟೇಶ್ವರ ಸಮೀಪದ ತನ್ನ ಫ್ಲಾಟ್‌ಗೆ ಆಗಾಗ ಕರೆಯಿಸಿಕೊಳ್ಳುತ್ತಿದ್ದ ಎಂದು ಆರೋಪಿಸಲಾಗಿದೆ.
ಮದುವೆಯಾಗುವುದಾಗಿ ಹೇಳಿದ್ದ ಅಜೀಜ್‌ನ ಮಾತು ನಂಬಿದ್ದ ಯುವತಿ ಆತನೊಡನೆ ಸಂಪರ್ಕದಲ್ಲಿದ್ದಳು. ಆತನ ಕಪಟ ಪ್ರೀತಿಯ ಕರಾಳ ಮುಖದ ಅರಿವಾದ ಯುವತಿ ಸೋಮವಾರ ರಾತ್ರಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಬಳಿಕ ಮಣಿಪಾಲ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡಿ ಬುಧವಾರ ಮೃತಪಟ್ಟಿದ್ದಾರೆ ಎಂದು ಹಿಂದೂ ಸಂಘಟನೆ ಆರೋಪಿಸಿವೆ.
PublicNext
26/05/2022 05:32 pm