ಕಾಪು: ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿ 2 ವರ್ಷಗಳಿಂದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಯನ್ನು ಕಾಪು ಪೊಲೀಸರು ನಿನ್ನೆ ಮುಂಬಯಿ ಏರ್‌ಪೋರ್ಟ್ ನಲ್ಲಿ ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ನಿವಾಸಿ ನಿಸಾರ್ ಅಹಮದ್ (33) ಬಂಧಿತ ಆರೋಪಿ.
ಆರೋಪಿಯು ಉದ್ಯಾವರ ನಿವಾಸಿ ಹೀನಾ ಅವರೊಂದಿಗೆ 2019ರಲ್ಲಿ ವಿವಾಹವಾಗಿದ್ದು ಬಳಿಕ ತನ್ನಮನೆಯವರೊಂದಿಗೆ ಸೇರಿ ಕಿರುಕುಳ ನೀಡಲಾರಂಭಿಸಿದ್ದ. 2020ರಲ್ಲಿ ಕಾವು ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿತ್ತು. ಈ ನಡುವೆ ನಿಸಾರ್ ಅಹಮದ್ ವಿದೇಶಕ್ಕೆ ತೆರಳಿ ತಲೆ ಮರೆಸಿಕೊಂಡಿದ್ದ. ಆರೋಪಿಯ ಬಂಧನದ ಬಗ್ಗೆ ಎಲ್‌ಒಸಿ ನೋಟಿಸು ಜಾರಿ ಮಾಡಲಾಗಿತ್ತು. ಮೇ 23ರಂದು ದುಬೈ ವಿಮಾನದ ಮೂಲಕ ಮುಂಬಯಿ ಏರ್‌ಪೋರ್ಟ್‌ಗೆ ಬಂದಿಳಿದ ನಿಸಾರ್‌ನನ್ನು ಎಮಿಗ್ರೇಶನ್ ಅಧಿಕಾರಿಗಳು ವಶಕ್ಕೆ ಪಡೆದು ಉಡುಪಿ ಪೊಲೀಸರಿಗೆ ಮಾಹಿತಿ ನೀಡಿದ್ದರು.ಬಳಿಕ ಕಾಪು ಪೊಲೀಸರು ಆರೋಪಿಯನ್ನು ಬಂಧಿಸಿ ಕರೆತಂದಿದ್ದಾರೆ.ನ್ಯಾಯಾಲಯವು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
Kshetra Samachara
26/05/2022 08:29 am