ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ಸುಟ್ಟ ಕಾರಲ್ಲಿ ಬೆಂಗಳೂರಿನ ಯುವ ಜೋಡಿಯ ಮೃತದೇಹ: ಪೆಟ್ರೋಲ್ ಸುರಿದು ಆತ್ಮಹತ್ಯೆ?

ಬ್ರಹ್ಮಾವರ: ಕಾರಿನೊಳಗೆ ಪೆಟ್ರೋಲ್ ಸುರಿದುಕೊಂಡು ಯುವ ಜೋಡಿ ಆತ್ಮಹತ್ಯೆ (?) ಮಾಡಿಕೊಂಡಿರುವ ಪ್ರಕರಣವೊಂದು ಬ್ರಹ್ಮಾವರ ತಾಲೂಕಿನ ಮಂದಾರ್ತಿ ಸಮೀಪದ ಹೆಗ್ಗುಂಜ್ಜೆಯಲ್ಲಿ ಸಂಭವಿಸಿದೆ.

ಮುಂಜಾನೆ 3:00 ಗಂಟೆ ಸುಮಾರಿಗೆ ಸುಟ್ಟ ಕಾರು ಸಮೇತ ಈ ಜೋಡಿಯ ಮೃತದೇಹ ಪತ್ತೆಯಾಗಿದೆ. ಬೆಂಗಳೂರಿನ ಆರ್.ಟಿ.ನಗರದ ಯಶವಂತ ಯಾದವ್ , ಜ್ಯೋತಿ ಮೃತರು ಎಂದು ಗುರುತಿಸಲಾಗಿದೆ.

ಕಳೆದ ಮೂರು ದಿನಗಳ ಹಿಂದೆ‌ ಈ ಜೋಡಿ ಮಿಸ್ಸಿಂಗ್ ಆಗಿದ್ದು ಕೇಸು ದಾಖಲಾಗಿತ್ತು.ನಿನ್ನೆ ಮಂಗಳೂರಿಗೆ ಬಂದು ಕಾರೊಂದನ್ನು ಈ ಜೋಡಿಯು ಬಾಡಿಗೆ ಪಡೆದಿತ್ತು.ಇವತ್ತು ಮುಂಜಾನೆ ಕಾರಿನೊಳಗೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.ಸ್ಥಳೀಯರ ನೆರವಿನಿಂದ ಬೆಂಕಿ ನಂದಿಸಿದಾಗ ಇಬ್ಬರ ಶವ ಪತ್ತೆಯಾಗಿದ್ದು ,ಸ್ವಿಫ್ಟ್ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ.

ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Shivu K
PublicNext

PublicNext

22/05/2022 10:31 am

Cinque Terre

52.95 K

Cinque Terre

3

ಸಂಬಂಧಿತ ಸುದ್ದಿ