ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಮಂದಾರ್ತಿ ಸಮೀಪ ಸುಟ್ಟು ಕರಕಲಾದ ಕಾರು ಮತ್ತು ಕಾರಿನೊಳಗೆ ಜೋಡಿ ಮೃತದೇಹ ನಿಗೂಢವಾಗಿ ಪತ್ತೆಯಾಗಿದೆ.ಮಂದರ್ತಿ ಸಮೀಪ ಹೆಗ್ಗುಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊತ್ತೂರು ಎಂಬಲ್ಲಿ ಇವತ್ತು ನಸುಕಿನ ವೇಳೆ ಗ್ರಾಮಸ್ಥರು ಈ ದೃಶ್ಯ ಕಂಡು ಬೆಚ್ಚಿ ಬಿದ್ದಿದ್ದಾರೆ. ಬೆಂಕಿಗೆ ಆಹುತಿಯಾದ ಕಾರು ಹಾಗೂ ಎರಡು ಮೃತದೇಹ ಪತ್ತೆಯಾಗಿದೆ.
ಇಂದು ಮುಂಜಾನೆ 3 ಗಂಟೆ ಸುಮಾರಿಗೆ ಬೆಂಕಿ ಹೊತ್ತಿ ಉರಿಯುವುದನ್ನು ಸ್ಥಳೀಯರು ನೋಡಿದ್ದಾರೆ. ಕಾರಿನಲ್ಲಿ ಇರುವವರು ಯಾರು? ಎಲ್ಲಿಂದ ಬಂದವರು? ಇದು ಅಪಘಾತವೇ? ಆತ್ಮಹತ್ಯೆಯೇ? ಎಂಬ ಬಗ್ಗೆ ಯಾವುದೇ ಖಚಿತ ಮಾಹಿತಿ ಲಭ್ಯವಿಲ್ಲ. ಬ್ರಹ್ಮಾವರ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.ಈ ಜೋಡಿಯು ಬೆಂಗಳೂರು ಕಡೆಯಿಂದ ಬಂದಿರುವ ಬಗ್ಗೆ ಸ್ಥಳೀಯರು ಮಾತನಾಡುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
PublicNext
22/05/2022 08:46 am