ಮೂಡುಬಿದಿರೆ:ಒಂಟಿಕಟ್ಟೆಯ ನಿವಾಸಿ ರವಿಪೂಜಾರಿಯ ಪುತ್ರ ರಾಕೇಶ್ (27) ಆತ್ಮಹತ್ಯೆಗೆ ಶರಣಾದ ಯುವಕ.ರಾಕೇಶ್ ಅವರು ಕಳೆದ ಮೂರು ದಿನಗಳ ಹಿಂದೆ ಮನೆಯಲ್ಲಿ ಯಾರಿಗೂ ತಿಳಿಸದೆ ಹೋಗಿದ್ದರು. ಮನೆಗೆ ಹಿಂತಿರುಗಿ ಬರದಿದ್ದುದರಿಂದ ಕರೆ ಮಾಡಿದಾಗ ಮೊಬೈಲ್ ಸ್ವಿಚ್ಡ್ ಅಫ್ ಆಗಿತ್ತು. ಆದರೆ ಬುಧವಾರದಂದು ಕಾರ್ಕಳ ಕಲ್ಯಾದಲ್ಲಿರುವ ತನ್ನ ತಂದೆಯ ಮನೆಗೆ ತೆರಳಿ ಮಾತನಾಡಿ ತನಗೆ ಆರ್ಥಿಕ ತೊಂದರೆಯಿದೆ ಎಂದು ಹೇಳಿಕೊಂಡಿದ್ದಾರೆನ್ನಲಾಗಿದೆ.
ನಂತರ ಅಲ್ಲಿಂದ ತೆರಳಿದ್ದು ಮೂಡುಬಿದಿರೆಯ ಮನೆಗೆ ಬಂದಿರಲಿಲ್ಲ. ಇಂದು ಬಳ್ಕುಂಜೆ ಬಳಿ ಗುಡ್ಡದಲ್ಲಿ ರಾಕೇಶ್ ಅವರ ಮೃತ ದೇಹವು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೂಲ್ಕಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Kshetra Samachara
19/05/2022 08:45 pm