ಮಂಗಳೂರು: ನಗರದ ಎಮ್ಮೆ ಕೆರೆಯಲ್ಲಿ ರೌಡಿಶೀಟರ್ ರಾಹುಲ್ ತಿಂಗಳಾಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಮ್ಮೆಕೆರೆಯ ಮಹೇಂದ್ರ ಶೆಟ್ಟಿ ಮತ್ತು ಸುಶಿತ್, ಬೋಳಾರದ ಅಕ್ಷಯ್ ಕುಮಾರ್, ಮೋರ್ಗನ್‌ಗೇಟ್ ನಿವಾಸಿ ದಿಲ್ಲೇಶ್ ಬಂಗೇರ ಬಂಧಿತ ಆರೋಪಿಗಳು. ಅಲ್ಲದೇ ಬೋಳಾರದ ಶುಭಂ ಮತ್ತು ಎಮ್ಮೆಕೆರೆಯ ವಿಷ್ಣು ಎಂಬವರು ಕೊಲೆಗೆ ಸಹಕರಿಸಿದ್ದು, ಅವರನ್ನೂ ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಎಪ್ರಿಲ್ 28ರಂದು ಈ ಕೊಲೆ ನಡೆದಿದ್ದು, ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದರು. ಖಚಿತ ಮಾಹಿತಿ ಮೇರೆಗೆ ಆರು ಮಂದಿಯನ್ನು ಬಂಧಿಸಿ ಅವರಿಂದ ಮೂರು ತಲವಾರು, ಮೂರು ಚೂರಿ, ನಾಲ್ಕು ಕತ್ತಿ, ಎರಡು ಸ್ಕೂಟರ್, ಒಂದು ಬುಲ್ಲೆಟ್, ಐದು ಮೊಬೈಲ್ ವಶಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
Kshetra Samachara
09/05/2022 06:33 pm