ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಳ್ಳಾಲ: ನಗರಸಭೆಯ ನೀರು ಕೇಳಿದ್ದ ಯುವಕನಿಗೆ ಇರಿದು ಪರಾರಿಯಾಗಿದ್ದ ಟ್ಯಾಂಕರ್ ಚಾಲಕ ಅರೆಸ್ಟ್

ಉಳ್ಳಾಲ: ಕುಡಿಯುವ ನೀರು ಸರಬರಾಜು ಮಾಡುವ ವಿಚಾರದಲ್ಲಿ ತನ್ನ ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದನ್ನ ವಿಚಾರಿಸಲು ಹೋದ ರಿಜ್ವಾನ್ ಎಂಬುವರಿಗೆ ಹಲ್ಲೆ ಮಾಡಿ ಚೂರಿಯಿಂದ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಟ್ಯಾಂಕರ್ ಚಾಲಕ ಮೇಲಂಗಡಿ ನಿವಾಸಿ ಖಲೀಲ್ ಎಂಬಾತನನ್ನು ಜಪ್ಪು ನೇತ್ರಾವತಿ ಸೇತುವೆ ಬಳಿ ಉಳ್ಳಾಲ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಿದ್ದಾರೆ.

ಎಪ್ರಿಲ್ 29ರಂದು ಉಳ್ಳಾಲ ನಗರಸಭೆಯ ನೀರು ಸರಬರಾಜು ಮಾಡದ ಬಗ್ಗೆ ಚೆಂಬುಗುಡ್ಡೆ ನಿವಾಸಿ ರಿಜ್ವಾನ್ ಎಂಬವರ ತಾಯಿ ಟ್ಯಾಂಕರ್ ಚಾಲಕ ಖಲೀಲ್ ನಲ್ಲಿ ವಿಚಾರಿಸಿದ್ದರು.ಈ ವೇಳೆ ಆರೋಪಿ ಖಲೀಲ್ ರಿಜ್ವಾನ್ ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ತಾಯಿಗೆ ನಿಂದಿಸಿದ ಬಗ್ಗೆ ರಿಜ್ವಾನ್ ಮಾಸ್ತಿಕಟ್ಟೆ ಬಳಿ ಟ್ಯಾಂಕರ್ ಚಾಲಕ ಖಲೀಲ್‌ನಲ್ಲಿ ವಿಚಾರಿಸಿದ್ದ ಈ ವೇಳೆ ಮಾತಿಗೆ ಮಾತು ಬೆಳೆದು ರಿಜ್ವಾನ್‌ಗೆ ಖಲೀಲ್ ಚೂರಿಯಿಂದ ಇರಿದು ಪರಾರಿಯಾಗಿದ್ದ. ಈ ಬಗ್ಗೆ ರಿಜ್ವಾನ್ ಸ್ನೇಹಿತ ಸೈಫುದ್ದೀನ್ ನೀಡಿದ ದೂರಿನ ಮೇರೆಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮೆರೆಸಿಕೊಂಡಿದ್ದ ಟ್ಯಾಂಕರ್ ಚಾಲಕ ಖಲೀಲ್ ಎಂಬಾತನನ್ನು ಉಳ್ಳಾಲ ಪೊಲೀಸರು ಶನಿವಾರ ಜಪ್ಪು ನೇತ್ರಾವತಿ ಸೇತುವೆ ಬಳಿ ಬಂಧಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

08/05/2022 10:20 am

Cinque Terre

10.94 K

Cinque Terre

1

ಸಂಬಂಧಿತ ಸುದ್ದಿ