ಮಂಗಳೂರು: ದಂಪತಿ ಹಾಗೂ ಅವರ ಎಂಟು ವರ್ಷದ ಮಗುವಿನ ಮೇಲೆ ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆಯಲ್ಲಿ ಪಬ್ಲಿಕ್ ನೆಕ್ಸ್ಟ್ ವರದಿಯಿಂದ ಎಚ್ಚೆತ್ತ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಡ ಕುಟುಂಬದ ಬಿಪುಲ್ ಹಾಗೂ ಮಿಥಾರಾಯ್ ಮತ್ತು ಅವರ 8 ವರ್ಷದ ಮಗುವಿನ ಮೇಲೆ ವಿಶ್ವನಾಥ ಮತ್ತು ಅಮೃತ ದಂಪತಿ ಸೇರಿ ಇತರರು ರಾಕ್ಷಸಿ ಕೃತ್ಯ ಎಸಗಿದ್ದರು. ಬಿಪುಲ್ ಅವರಿಗೆ ದೊಣ್ಣೆಯಿಂದ ಥಳಿಸಿರುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿತ್ತು. ಗಾಯಾಳುಗಳು ಆಸ್ಪತ್ರೆ ದಾಖಲಾಗಿದ್ದಾರೆ. ಆದರೆ ದುಷ್ಕರ್ಮಿಗಳ ಬಗ್ಗೆ ಪೊಲೀಸರು ಯಾವುದೇ ಪ್ರಕರಣ ದಾಖಲಿಸಿರಲಿಲ್ಲ.
ಪಬ್ಲಿಕ್ ನೆಕ್ಸ್ಟ್ ಈ ಬಗ್ಗೆ ವರದಿ ಮಾಡಿದ ಬಳಿಕ ಎಚ್ಚೆತ್ತ ಪೊಲೀಸರು ವಿಶ್ವನಾಥ್ ಹಾಗೂ ಮಧುಸೂದನ್ ಎಂಬುವರನ್ನು ಬಂಧಿಸಿದ್ದಾರೆ. ಈ ಬಗ್ಗೆ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಳಿದ ಆರೋಪಿಗಳ ಪತ್ತೆ ಕಾರ್ಯಕ್ಕೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
Kshetra Samachara
07/05/2022 04:51 pm