ಉಳ್ಳಾಲ: ಸೋಮೇಶ್ವರದಲ್ಲಿ ಕೆಲ ತಿಂಗಳ ಹಿಂದೆ ಯುವಕನ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಉಳ್ಳಾಲ ಕಡಪ್ಪುರ ನಿವಾಸಿ ಸಮೀರ್ (28) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಉಳ್ಳಾಲದ ನಟೋರಿಯಸ್ ಟಾರ್ಗೆಟ್ ಗ್ಯಾಂಗ್‌ನ ಪ್ರಮುಖ ಇಲಿಯಾಸ್ ಕೊಲೆ ಸೇರಿದಂತೆ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಈತ ತಲಪಾಡಿ ಗಡಿ ಪ್ರದೇಶದಲ್ಲೂ ತಲ್ವಾರ್ ತೋರಿಸಿ ಬೆದರಿಕೆ ಯೊಡ್ಡಿದ್ದ .ಅಲ್ಲದೇ ಕೆಲ ತಿಂಗಳ ಹಿಂದಷ್ಟೆ ಸೋಮೇಶ್ವರದಲ್ಲಿ ಯುವಕನೊಬ್ಬನಿಗೆ ನಾಲ್ವರ ತಂಡ ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿತ್ತು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಜೇಶ್ವರ ನಿವಾಸಿ ಖಾದರ್ ಎಂಬಾತನನ್ನ ಪೊಲೀಸರು ಬಂಧಿಸಿದ್ದರು.ಇದೇ ಪ್ರಕರಣ ಸಂಬಂಧಿ ತಲೆಮರೆಸಿದ್ದ ಆರೋಪಿ ಸಮೀರ್ ನ ಬಂಧನಕ್ಕೆ ಕೋರ್ಟ್ ವಾರಂಟ್ ಜಾರಿಯಾಗಿತ್ತು.
ಬುಧವಾರ ಸಮೀರ್ ಪಂಪ್‌ವೆಲ್ ಮೂಲಕ ಬೆಂಗಳೂರಿಗೆ ತೆರಳುತ್ತಿದ್ದ ಬಗ್ಗೆ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿ ಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
Kshetra Samachara
05/05/2022 05:42 pm