ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡ ಆರೋಪಿ ಅರೆಸ್ಟ್

ಮಂಗಳೂರು: ಪ್ರಕರಣವೊಂದರ ಸಂಬಂಧ ನ್ಯಾಯಾಲಯಕ್ಕೆ ಹಾಜರಾಗದೆ ಸುಮಾರು ವರ್ಷಗಳಿಂದ ತಲೆಮರೆಸಿಕೊಂಡಿರುವ ಆರೋಪಿಯನ್ನು ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.ಕಾಸರಗೋಡು ಜಿಲ್ಲೆಯ ಚಟ್ಟಂಗಲ್ ಗ್ರಾಮ ಮೂಲದ ಮಹಮ್ಮದ್ ಕಬೀರ್ ಬಂಧಿತ ಆರೋಪಿ.

ಆರೋಪಿ ಮಹಮ್ಮದ್ ಕಬೀರ್ ಪ್ರಕರಣವೊಂದರ ಸಂಬಂಧ ನ್ಯಾಯಾಲಯಕ್ಕೆ ಬೇಕಾಗಿದ್ದ‌ ಆರೋಪಿಯಾಗಿದ್ದ. ಆದರೆ ಈತ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ. ಆದರೆ ಇದೀಗ ಆತ ಚಟ್ಟಂಗಲ್ ನಲ್ಲಿದ್ದ ತನ್ನ ಮನೆಯಲ್ಲಿ ಇರುವ ಬಗ್ಗೆ ಮಾಹಿತಿ ಪಡೆದ ಪುತ್ತೂರು ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ಆತನನ್ನು ಇಂದು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ‌. ಈತನ ಮೇಲೆ ಪುತ್ತೂರು ನಗರ ಪೊಲೀಸ್ ಠಾಣೆ, ಸುಳ್ಯ, ಮಡಿಕೇರಿ, ಕೇರಳ ಠಾಣಾ ವ್ಯಾಪ್ತಿಗಳಲ್ಲೂ ಪ್ರಕರಣ ಇರುವುದಾಗಿ ಮಾಹಿತಿಯಿದೆ.

Edited By : Nirmala Aralikatti
Kshetra Samachara

Kshetra Samachara

01/05/2022 11:15 pm

Cinque Terre

6.37 K

Cinque Terre

0

ಸಂಬಂಧಿತ ಸುದ್ದಿ