ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ಫಲಿತಾಂಶದ ಭಯ; ಪ್ರಥಮ ಪಿಯುಸಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು!

ಬೈಂದೂರು : ಪ್ರಥಮ ಪಿಯುಸಿ ಫಲಿತಾಂಶದ ಭಯದಿಂದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ತಗ್ಗರ್ಸೆ ಎಂಬಲ್ಲಿ ಶನಿವಾರ ಸಂಭವಿಸಿದೆ. ತಗ್ಗರ್ಸೆ ಗ್ರಾಮದ ಶೋಭಾ ಶೇರುಗಾರರ ಬಾಡಿಗೆ ಮನೆ ನಿವಾಸಿ ಬೇಬಿ ಶೆಡ್ತಿ ಎಂಬವರ ಮಗ ಸುದೀಪ್(17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.

ಸುದೀಪ್ ,ಬೈಂದೂರು ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಕಲಿಯುತ್ತಿದ್ದರು. ಎ.30ರ ಪ್ರಥಮ ಪಿಯುಸಿಯ ಫಲಿತಾಂಶದಲ್ಲಿ ತಾನು ಅನುತ್ತೀರ್ಣಗೊಳ್ಳಬಹುದು ಎಂಬ ಹೆದರಿಕೆಯಿಂದ ಜೀವನದಲ್ಲಿ ಜಿಗುಪ್ಪೆಗೊಂಡು ಮನೆಯ ಅಡುಗೆ ಕೋಣೆಯ ಮಾಡಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nirmala Aralikatti
Kshetra Samachara

Kshetra Samachara

01/05/2022 08:09 pm

Cinque Terre

10.45 K

Cinque Terre

2

ಸಂಬಂಧಿತ ಸುದ್ದಿ