ಮಂಗಳೂರು: ತೊಕ್ಕೊಟ್ಟು ಹುದಾ ಜುಮ್ಮಾ ಮಸೀದಿಯೊಳಗೆ ನುಗ್ಗಿ ನಮಾಜ್ ನಲ್ಲಿ ನಿರತರಾಗಿದ್ದ ಮಹಿಳೆಯರನ್ನು ಎಳೆದಾಡಿ ಗುಪ್ತಾಂಗ ತೋರಿಸಿದ ದುಷ್ಕರ್ಮಿಯನ್ನು ಉಳ್ಳಾಲ ಪೊಲೀಸರು ಹೆಡೆಮುರಿಕಟ್ಟಿ ಬಂಧಿಸಿದ್ದಾರೆ.
ಕಾರ್ಕಳ ತಾಲೂಕಿನ ನುಟ್ಟೆ ಮೂಲದ ಸುಜಿತ್ ಶೆಟ್ಟಿ (26) ಬಂಧಿತ ಆರೋಪಿ.
ರಂಜಾನ್ ತಿಂಗಳ ಪ್ರಯಕ್ತ ತೊಕ್ಕೊಟ್ಟು ಹುದಾ ಜುಮ್ಮಾ ಮಸೀದಿಯಲ್ಲಿಏಪ್ರಿಲ್ 28 ರಂದು ರಾತ್ರಿ ಲೈಲಾತುಲಗ ಖದರ್ ನ ವಿಶೇಷ ನಮಾಜ್ ಅನ್ನು ಆಯೋಜಿಸಗಿತ್ತು. ಈ ರಾತ್ರಿ ವಿಶೇಷ ಕಾರ್ಯಕ್ರಮಕ್ಕೆ ಮಹಿಳೆಯರು ಆಗಮಿಸಿ ನಮಾಜ್ ನಲ್ಲಿ ತೊಡಗಿದ್ದರು. ರಾತ್ರಿ 2ಗಂಟೆ ಸುಮಾರಿಗೆ ಮಸೀದಿ ಕೊಠಡಿಯಲ್ಲಿ ವಿಶೇಷ ನಮಾಜ್ ನಲ್ಲಿ ತೊಡಗಿದ್ದಲ್ಲಿಗೆ ಸುಜಿತ್ ಶೆಟ್ಟಿ ಅಕ್ರಮವಾಗಿ ಪ್ರವೇಶ ಮಾಡಿ ಮಹಿಳೆಯರನ್ನು ಎಳೆದಾಡಿ ಗುಪ್ತಾಂಗವನ್ನು ತೋರಿಸಿದ್ದಾನೆ. ತಕ್ಷಣ ಅಲ್ಲಿ ಸೇರಿದ್ದವರು ಆತನನ್ನು ಪೊಲೀಸರಿಗೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
30/04/2022 02:38 pm