ಬೈಂದೂರು: ಇಲ್ಲಿನ ಮರವಂತೆ ಗ್ರಾಮದ ಗಾಂಧಿನಗರ ನೈಕಾಡಿ ಎಂಬಲ್ಲಿ ರವೀನಾ ಎನ್ನುವವರ ಮನೆಗೆ ನುಗಿದ್ದ ಕಳ್ಳರು ಲಕ್ಷಾಂತರ ಮೌಲ್ಯದ ನಗದು ಕಳವು ಮಾಡಿದ ಪ್ರಕರಣ ಬೈಂದೂರು ಸಮೀಪದ ನೈಕಾಡಿ ಮನೆ ಎಂಬಲ್ಲಿ ನಡೆದಿದೆ.
ಕಪಾಟಿನ ಬೀಗ ತಗೆದು ಒಳ ಪ್ರವೇಶಿಸಿ ಲಾಕರ್ ನಲ್ಲಿಟ್ಟಿದ್ದ ಚಿನ್ನದ ಕರಿಮಣಿ ಸರ, ಚಿನ್ನದ ಬೆಂಡೋಲೆ ಹಾಗೂ 8,500 ನಗದು ಕಳವಾಗಿದ್ದು, ಸುಮಾರು 1,38,000 ಮೌಲ್ಯದ ವಸ್ತು ಕಳವಾಗಿದೆ ಎಂದು ಅಂದಾಜಿಸಲಾಗಿದ್ದು, ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
28/04/2022 07:20 am