ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು ಮೂಲದ ವ್ಯಕ್ತಿಗೆ ಬಂಟ್ವಾಳದಲ್ಲಿ ಮಾರಣಾಂತಿಕ ಹಲ್ಲೆ: ಇಬ್ಬರ ಬಂಧನ

ಬಂಟ್ವಾಳ: ವಾಹನವೊಂದಕ್ಕೆ ಸೈಡ್ ಕೊಡುವ ವಿಚಾರದಲ್ಲಿ ಮಾತಿಗೆ ಮಾತಿಗೆ ಬೆಳೆದು ಬೆಂಗಳೂರು ಮೂಲದ ವ್ಯಕ್ತಿಯೋರ್ವನಿಗೆ ಮನೆಮಂದಿಯ ಎದುರಿನಲ್ಲೇ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಸಹೋದರಿಬ್ಬರನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ಬಂಧಿಸಿದ್ದಾರೆ.

ಮಂಗಳೂರು ಕಣ್ಣೂರು ನಿವಾಸಿಗಳಾದ ಇಸ್ಮಾಯಿಲ್ ಯಾನೆ ಬಾತಿಶ್ ಹಾಗೂ ಯಸೀನ್ ಬಾಧಿತ ಆರೋಪಿಗಳು ಬ್ರಹ್ಮರಕೋಟ್ಲು ಟೋಲ್ ನಲ್ಲಿ ಎರಡು ಕಾರುಗಳು ಸೈಡ್ ಕೊಡುವ ವಿಚಾರದಲ್ಲಿ ಕಾರೊಂದರ ಸೈಡ್ ಮಿರರ್ ಗೆ ಡಿಕ್ಕಿಯಾಗಿದೆ.

ಈ ವಿಚಾರದಲ್ಲಿ ಮಾತಿಗೆ ಮಾತಿಗೆ ಬೆಳೆದು ಹಲ್ಲೆ ನಡೆಸಿದ್ದಾರೆ. ಬೆಂಗಳೂರು ಮೂಲದ ನಿವಾಸಿ ಭಾಸ್ಕರ್ ಪೈ ಅವರು ಉಡುಪಿಗೆ ಕಾರ್ಯಕ್ರಮವೊಂದಕ್ಕೆ ಮನೆಮಂದಿಯ ಜೊತೆಯಲ್ಲಿ ತೆರಳಿ ಕಾರ್ಯಕ್ರಮ ಮುಗಿಸಿ ವಾಪಸು ಆಗುವ ಸಂದರ್ಭದಲ್ಲಿ ಬ್ರಹ್ಮರಕೋಟ್ಲು ಟೋಲ್ ಗೇಟ್ ನಲ್ಲಿ ಇಬ್ಬರು ಸೇರಿ ಮನೆಯವರ ಎದುರಿನಲ್ಲಿಯೇ ಮಾರಣಾಂತಿಕ ವಾಗಿ ಹಲ್ಲೆ ನಡೆಸಿ ನೆಲಕ್ಕುರಳಿಸಿ ಕಾಲಿನಿಂದ ಒದೆಯುವ ದೃಶ್ಯ ಹಾಗೂ ಮನೆಮಂದಿ ಬಿಡುವಂತೆ ಗೊಳಾಡುವ ದೃಶ್ಯ ಟೋಲ್ ಗೇಟ್ ನಲ್ಲಿರುವ ಸಿ.ಸಿ.ಕ್ಯಾಮರಾ ದಲ್ಲಿ ಸೆರೆಯಾಗಿದೆ.

ಭಾಸ್ಕರ್ ಪೈ ಅವರ ದೂರಿನಂತೆ ವಿಡಿಯೋ ಆಧಾರದ ಮೇಲೆ ಪೊಲೀಸರು ಕಣ್ಣೂರು ನಿವಾಸಿಗಳಾದ ಸಹೋದರರನ್ನು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ.

ಡಿ.ವೈ.ಎಸ್.ಪಿ.ಪ್ರತಾಪ್ ಥೋರಾಟ್ ಅವರ ಮಾರ್ಗದರ್ಶನ ದಲ್ಲಿ ಬಂಟ್ವಾಳ ನಗರ ಠಾಣಾ ಪೋಲೀಸ್ ಇನ್ಸ್ ಪೆಕ್ಟರ್ ವಿವೇಕಾನಂದ ಅವರ ನಿರ್ದೇಶನದಂತೆ ನಗರ ಠಾಣಾ ಎಸ್.ಐ.ಅವಿನಾಶ್ ಗೌಡ ಅವರ ನೇತೃತ್ವದ ತಂಡ ಆರೋಪಿ ಗಳನ್ನು ಬಂಧಿಸಿ ದ್ದಾರೆ.

Edited By : Nirmala Aralikatti
Kshetra Samachara

Kshetra Samachara

27/04/2022 09:11 pm

Cinque Terre

10.27 K

Cinque Terre

2

ಸಂಬಂಧಿತ ಸುದ್ದಿ