ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ತೇಜಸ್ವಿನಿ ಆಸ್ಪತ್ರೆ ಚೇರ್ ಮೆನ್ ಫೇಸ್ ಬುಕ್ ಹ್ಯಾಕ್ ; ಪ್ರಕರಣ ದಾಖಲು

ಮಂಗಳೂರು: ನಗರದ ತೇಜಸ್ವಿನಿ ಆಸ್ಪತ್ರೆಯ ಚೇರ್ ಮೆನ್ ಡಾ.ಶಾಂತರಾಮ ಶೆಟ್ಟಿಯವರ ಫೇಸ್ ಬುಕ್ ಹ್ಯಾಕ್ ಆಗಿರುವ ಬಗ್ಗೆ ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರಿನ ಪ್ರತಿಷ್ಠಿತ ತೇಜಸ್ವಿನಿ ಆಸ್ಪತ್ರೆಯ ಚೇರ್ ಮೆನ್ ಹಾಗೂ ಕನ್ ಸಲ್ಟೆಂಟ್ ಸರ್ಜನ್ ಡಾ.ಶಾಂತರಾಮ ಶೆಟ್ಟಿಯವರು ಈ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಮ್ಮ ಫೇಸ್ ಬುಕ್ ಹ್ಯಾಕ್ ಆಗಿರುವ ಬಗ್ಗೆ ಸ್ನೇಹಿತರೊಬ್ಬರಿಂದ ತಿಳಿದು ಬಂದಿದೆ. ಈ ಮೂಲಕ ತಮ್ಮ ಫೇಸ್ ಬುಕ್ ಅನ್ನು ಯಾರೋ ಹ್ಯಾಕ್ ಮಾಡಿ ಫೊರೆಕ್ಸ್ ಟ್ರೇಡ್ ಗಳಿಗೆ ಸಂಬಂಧಿಸಿದ ಮೆಸೇಜ್ ಗಳನ್ನು ಕಳುಹಿಸುತ್ತಿದ್ದಾರೆ ಎಂದು ದೂರು ನೀಡಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

19/04/2022 10:55 pm

Cinque Terre

8.04 K

Cinque Terre

0

ಸಂಬಂಧಿತ ಸುದ್ದಿ