ಮಂಗಳೂರು: ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮ ಸಾಗಾಟದ 10,62,660 ಲಕ್ಷ ರೂ. ಮೌಲ್ಯದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಸೀಝ್ ಮಾಡಿದ್ದಾರೆ.
ದುಬೈನಿಂದ ಆಗಮಿಸಿದ್ದ ಕಾಸರಗೋಡು ಮೂಲದ ಪ್ರಯಾಣಿಕ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದ. ಈತನನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ಮಾಡಿದ್ದಾರೆ. ಈ ಸಂದರ್ಭ ಆತನಲ್ಲಿ ಅಕ್ರಮ ಸಾಗಾಟದ ಚಿನ್ನ ಪತ್ತೆಯಾಗಿದೆ.
ಪ್ರಯಾಣಿಕ ಐಕಾನ್ ಬ್ರ್ಯಾಂಡ್ ಸಿಟ್ರಸ್ ಜ್ಯೂಸರ್ನ ಶಾಫ್ಟ್ನೊಳಗಿನ ಸಿಲಿಂಡರಿನಾಕಾರದ ರಾಡ್ನೊಳಗೆ ಮರೆ ಮಾಚಿ ಚಿನ್ನ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ತಕ್ಷಣ ಪ್ರಯಾಣಿಕನ ಸಹಿತ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಪ್ರಯಾಣಿಕನಿಂದ 199 ಗ್ರಾಂ ತೂಕದ 10,62,660 ಲಕ್ಷ ರೂ. ಮೌಲ್ಯದ 24 ಕ್ಯಾರೆಟ್ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ತನಿಖೆ ಮುಂದುವರಿದಿದೆ.
Kshetra Samachara
18/04/2022 10:53 pm