ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಿಎಸ್ಐಗೆ ಇರಿದು ಭೂಗತನಾಗಿ, ಬೆಂಗಳೂರಲ್ಲಿ ಗೊಂಬೆ ಮಾರುತ್ತಿದ್ದ ಖತರ್‌ನಾಕ್ ಖದೀಮ ಅರೆಸ್ಟ್

ಉಳ್ಳಾಲ: ಬೆಲೆ ಬಾಳುವ ವಾಚ್ ಕಳವು ಆರೋಪಿಯನ್ನ ಬಂಧಿಸಲು ತೆರಳಿದ್ದ ಕೊಣಾಜೆ ಪಿಎಸ್ಐ ಶರಣಪ್ಪ ಅವರಿಗೆ ಇರಿದು ಭೂಗತನಾಗಿ, ಬೆಂಗಳೂರಲ್ಲಿ ಗೊಂಬೆ ಮಾರುತ್ತಿದ್ದ ಖತರ್‌ನಾಕ್ ಖದೀಮನನ್ನು ಪೊಲೀಸರು ಬಂಧಿಸಿದ್ದಾರೆ.

ಸಾಲೆತ್ತೂರು,ಕಾಡುಮಠ ನಿವಾಸಿ ಮಹಮ್ಮದ್ ಸಾಧಿಕ್(23) ಪಿಎಸ್ಐಗೆ ಇರಿದ ಬಂಧಿತ ವಾಚ್ ಕಳವು ಆರೋಪಿ. ನಗರದ ಬಂದರು ಠಾಣಾ ವ್ಯಾಪ್ತಿಯಲ್ಲಿ ಬೆಳೆ ಬಾಳುವ ವಾಚ್ ಕಳ್ಳತನ ಪ್ರಕರಣ ನಡೆದಿತ್ತು.ಕೃತ್ಯ ನಡೆಸಿದ ಆರೋಪಿ ಮಹಮ್ಮದ್ ಸಾಧಿಕ್ ನಟೋರಿಯಸ್ ಆಗಿದ್ದು ಈ ಹಿಂದೆ ಕೂಡಾ ತನ್ನನ್ನ ಬಂಧಿಸಲು ತೆರಳಿದ್ದ ಬಂದರು ಪೊಲೀಸ್ ಠಾಣಾ ಸಿಬ್ಬಂದಿ ವಿನೋದ್ ಎಂವವರಿಗೆ ಚೂರಿಯಿಂದ ಇರಿದು ಪರಾರಿಯಾಗಿದ್ದ.ಕಳೆದ ಮಾ.23 ರ ಬುಧವಾರ ರಾತ್ರಿ ಕಳ್ಳತನ ಆರೋಪಿ ಸಾಧಿಕ್ ಕೊಣಾಜೆ ಠಾಣಾ ವ್ಯಾಪ್ತಿಯ ಅರ್ಕಾಣ ಎಂಬಲ್ಲಿನ ತನ್ನ ಪತ್ನಿ ಮನೆಯಲ್ಲಿರುವುದರ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು.ಮಾಹಿತಿ ಮೇರೆಗೆ ಕೊಣಾಜೆ ಪಿಎಸ್ಐ ಶರಣಪ್ಪ ಭಂಡಾರಿ ನೇತೃತ್ವದ ತಂಡ ಸಾಧಿಕ್ ಬಂಧನಕ್ಕೆ ತೆರಳಿದ್ದ ವೇಳೆ ಸಾಧಿಕ್ ಪಿಎಸ್ಐಗೆ ಇರಿದು ಪರಾರಿಯಾಗಿದ್ದ.ಸಾಧಿಕ್ ಪರಾರಿಯಾಗಲು ಸಹಕರಿಸಿದ್ದ ಆತನ ಸಹೋದರ ನಾಸಿರ್ ಎಂಬಾತನನ್ನ ಪೊಲೀಸರು ಬಂಧಿಸಿ ಠಾಣೆಯಲ್ಲಿ ಆತಿಥ್ಯವನ್ನ ನೀಡಿ ವಿಚಾರಣೆ ನಡೆಸಿದ್ದರು.

ಚೂರಿ ಇರಿದ ಖತರ್ನಾಕ್ ಕಳ್ಳ ಸಾಧಿಕ್ ಮಾತ್ರ 20 ದಿವಸ ಭೂಗತನಾಗಿದ್ದ.ಆರಂಭದಲ್ಲಿ ಗುಜರಾತಿಗೆ ಪಲಾಯನಗೈದಿದ್ದ ಸಾಧಿಕ್ ಕಳೆದ ಬುಧವಾರದಂದು ಬೆಂಗಳೂರಿಗೆ ಆಗಮಿಸಿದ್ದನಂತೆ.ಬೆಂಗಳೂರಿನ ಹೆಚ್.ಎಸ್.ಆರ್.ಲೇಔಟಲ್ಲಿ ಸಾಧಿಕ್ ಸ್ನೇಹಿತನೊಂದಿಗೆ ಆಟಿಕೆ ಗೊಂಬೆಗಳನ್ನು ಮಾರುತ್ತಿದ್ದ.ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕೊಣಾಜೆ ಪೊಲೀಸರು ಮಹಮ್ಮದ್ ಸಾಧಿಕನ್ನ ಬಂದಿಸಿದ್ದಾರೆ.ಬಂಧಿತ ಆರೋಪಿ ವಿರುದ್ಧ ಕೇರಳದಲ್ಲಿ ಹಲವಾರು ಪ್ರಕರಣಗಳಿವೆಯಂತೆ.

ಎಸಿಪಿ ದಿನಕರ ಶೆಟ್ಟಿ ಮಾರ್ಗದರ್ಶನದಲ್ಲಿ ಕೊಣಾಜೆ ಇನ್ಸ್ ಪೆಕ್ಟರ್ ಪ್ರಕಾಶ್ ದೇವಾಡಿಗ, ಪಿಎಸ್ಐ ಶರಣಪ್ಪ ಭಂಡಾರಿ, ಸಿಬ್ಬಂದಿಗಳಾದ ಅಶೋಕ್, ಶಿವ, ಪುರುಷೋತ್ತಮ್, ಉಮೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Edited By : Nagaraj Tulugeri
PublicNext

PublicNext

15/04/2022 07:09 pm

Cinque Terre

29.56 K

Cinque Terre

5

ಸಂಬಂಧಿತ ಸುದ್ದಿ