ಉಡುಪಿ: ಗ್ರಾ.ಪಂ. ಸದಸ್ಯ, ಪಡುಬಿದ್ರಿ ಕಂಚಿನಡ್ಕ ನಿವಾಸಿ ಕಲಂದರ್ ಶಫಿ ಎಂಬಾತ ಮೂವರು ಹರೆಯಕ್ಕೆ ಬಂದ ಹೆಣ್ಣು ಮಕ್ಕಳ ತಂದೆಯಾಗಿದ್ದು, ಈತ ಸ್ಥಳೀಯ ಪೊಲೀಸರನ್ನು ತನ್ನ ಮುಷ್ಟಿಯಲ್ಲಿ ಇರಿಸಿಕೊಂಡು ಮಾಡುತ್ತಿರುವ ಅನ್ಯಾಯಗಳು ಒಂದೆರಡಲ್ಲ.
ಪಡುಬಿದ್ರಿಯ ದೀನ್ ಸ್ಟೀನ್ ನಿವಾಸಿಯಾಗಿರುವ ನಾನು ಮೊಹಮ್ಮದ್ ಇಲ್ಯಾಸ್, ನನಗೆ ಜೀನತ್ ಎಂಬಾಕೆಯೊಂದಿಗೆ 2018ರಲ್ಲಿ ಮದುವೆಯಾಗಿತ್ತು ನಮಗೆ ಒರ್ವ ಪುತ್ರನಿದ್ದಾನೆ. ಚೆನ್ನಾಗಿಯೇ ಇದ್ದ ನಮ್ಮ ಸಂಸಾರಕ್ಕೆ ಈ ಹೆಣ್ಣುಬಾಕ ಕಲಂದರ್ ಶಫಿಯ ಕಣ್ಣು ಬಿದ್ದಿದ್ದು, ಪತ್ನಿಯನ್ನು ಪುಸಲಾಯಿಸಿ ತನ್ನ ಬಲೆಗೆ ಬೀಳಿಸಿಕೊಂಡಿದ್ದಾನೆ.
ಇತ್ತೀಚೆಗೆ ತನ್ನ ಪತ್ನಿ ನಾಪತ್ತೆಯಾಗಿದ್ದು ಇದರಲ್ಲಿ ಶಫಿ ಪಾತ್ರವೂ ಇದೆ. ನಾನು ಪಡುಬಿದ್ರಿ ಠಾಣೆಗೆ ದೂರು ನೀಡಲು ಬಂದರೆ ಅವರು ನನ್ನಿಂದ ದೂರು ಪಡೆಯಲು ನಿರಾಕರಿಸಿದ್ದು, ಮರುದಿನ ಆಕೆಯ ತಾಯಿ ದೂರು ನೀಡಲು ಠಾಣೆಗೆ ಬಂದಾಗ ನಾನೂ ಹೋಗಿದ್ದು ಶಾಫಿಯೂ ಕಾಣುತ್ತಿಲ್ಲವಾಗಿದ್ದರಿಂದ ಆತನ ಬಗ್ಗೆ ಸಂಶಯ ವ್ಯಕ್ತ ಪಡಿಸಿ ಆತನನ್ನು ವಿಚಾರಿಸಿದರೆ ಸತ್ಯ ತಿಳಿಯುವುದು ಎಂದರೂ ಕೇಳದ ಪೊಲೀಸರು, ಆತನ ಋಣಕ್ಕೆ ಬಿದ್ದವರಂತೆ ಆತನ ಪರವಾಗಿ ವಾದಿಸಿದ್ದಾರೆ.
ಜೀನತಳನ್ನು ವಿಚಾರಣೆ ನಡೆಸುವ ಪ್ರಹಸನ ನಡೆಸಿದ ಪೊಲೀಸರು ಶಫಿಯ ಹೆಸರು ಹೇಳದಂತೆ ನೋಡಿಕೊಂಡಿದ್ದಾರೆ.ಇದೀಗ ಠಾಣೆಯಲ್ಲೂ ನನಗೆ ನ್ಯಾಯ ಸಿಗದೇ ಇದ್ದಿದ್ದರಿಂದ ಪತ್ರಿಕಾಗೋಷ್ಠಿ ನಡೆಸುತ್ತಿರುವುದಾಗಿ ಮೊಹಮ್ಮದ್ ಇಲ್ಯಾಸ್ ಹೇಳಿದ್ದಾರೆ.
Kshetra Samachara
15/04/2022 06:58 pm