ಮಲ್ಪೆ : ಮಲ್ಪೆಯ ಬಾಪುತೋಟ ಧಕ್ಕೆಯಲ್ಲಿ ಬೋಟಿನಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಮೀನು ಕಾರ್ಮಿಕನೋರ್ವ ತನ್ನ ಜೊತೆಗಾರನನ್ನು ರಾಡ್ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ನಡೆದಿದೆ. ಕೊಪ್ಪಲ ಜಿಲ್ಲೆಯ ಕುಕ್ಕುನೂರಿನ ಮಹಾಂತೇಶ್ (35)
ಕೊಲೆಯಾದನಾದರೆ, ಹೊನ್ನಾವರ ತಾಲೂಕಿನ ಬೇಳೆಕೆರೆಯ ನಾಗರಾಜ್ (26) ಕೊಲೆ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಇವರು ಇತರ ಮೀನುಗಾರರೊಂದಿಗೆ ಶ್ರೀಗುರು ಸಿದ್ದಿ ಬೋಟಿನಲ್ಲಿ ಮೀನುಗಾರಿಕೆ ಮುಗಿಸಿ ಎ.13ರಂದು ಮಲ್ಪೆ ಬಂದರಿಗೆ ಆಗಮಿಸಿದ್ದರು. ಬೋಟು ಬಾಪುತೋಟ ಧಕ್ಕೆಯಲ್ಲಿ ಲಂಗರು ಹಾಕಿ, ಬೋಟಿನ ಕಲಾಸಿಗಳಾದ ಬರಮಪ್ಪ ಮತ್ತು ಮಹಾಂತೇಶ ಮಲ್ಪೆಪೇಟೆಗೆ ಹೋಗಿದ್ದರು. ಅಲ್ಲಿಂದ ಇವರಿಬ್ಬರು ರಾತ್ರಿ ಸ್ನೇಹಿತ ಶಾಂತಪ್ಪ ಜೊತೆ ಬೋಟಿಗೆ ಬಂದಿದ್ದರು.
ಬೋಟಿನಲ್ಲಿ ಇತರ ಕಲಾಸಿಗರಾದ ಉಮೇಶ ಮತ್ತು ನಾಗರಾಜ ಮಲಗಿದ್ದರು. ಮಹಾಂತೇಶ್ ಹಾಗೂ ಇತರರು ಊಟ ಮಾಡುವುದಕ್ಕಾಗಿ ಬೋಟಿನ ಕ್ಯಾಬಿನ್ ಒಳಗಡೆಯ ಲೈಟ್ ಹಾಕಿದರು. ಆಗ ಲೈಟ್ ಆಫ್ ಮಾಡುವಂತೆ ನಾಗರಾಜ ತಿಳಿಸಿದ್ದು ಇದೇ ವಿಚಾರವಾಗಿ ಮಹಾಂತೇಶ ಮತ್ತು ನಾಗರಾಜ ಮಾತಿನ ಚಕಮಕಿ ನಡೆಯಿತು. ಹೀಗೆ ಮಾತಿಗೆ ಮಾತು ಬೆಳೆದು ನಾಗರಾಜ ಸಿಟ್ಟಿನಿಂದ ಮಹಾಂತೇಶ್ಗೆ ಹಲ್ಲೆ ಮಾಡಿ, ಕಬ್ಬಿಣದ ರಾಡ್ನಿಂದ ಮಹಾಂತೇಶನ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದ್ದಾಗಿ ದೂರಲಾಗಿದೆ.ಈ ಸಂಬಂಧ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
15/04/2022 11:18 am