ಉಡುಪಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ ಉಡುಪಿಯ ಲಾಡ್ಜ್ ಗೆ ಮೃತರ ಸಹೋದರ ಹಾಗೂ ಸಂಬಂಧಿಕರು ತಡರಾತ್ರಿ ಆಗಮಿಸಿದ್ದಾರೆ.
ಮೃತ ಸಂತೋಷ್ ಸಹೋದರ ಬೆಂಗಳೂರಿನ ವಿಜಿ ಪುರಂ ಪೊಲೀಸ್ ಠಾಣೆಯ ನಿರೀಕ್ಷಕ ಬಸನ ಗೌಡ ಪಾಟೀಲ್ ಹಾಗೂ ಇತರ ಸಂಬಂಧಿಕರು ವಾಹನಗಳಲ್ಲಿ ಆಗಮಿಸಿದರು.ಬೆಳಗ್ಗೆಯಿಂದ ರಾತ್ರಿವರೆಗೆ ಸೀಲ್ ಮಾಡಲಾಗಿದ್ದ ಆತ್ಮಹತ್ಯೆ ಮಾಡಿಕೊಂಡ ರೂಮಿನ ಬೀಗವನ್ನು ತೆರೆದು ಕುಟುಂಬದವರಿಗೆ ನೋಡಲು ಅವಕಾಶ ಕಲ್ಪಿಸಲಾಯಿತು.
ಸಂಬಂಧಿಕರು ಪೊಲೀಸ್ ಠಾಣೆಗೆ ದೂರು ನೀಡಲಿದ್ದು, ನಂತರ ಪೊಲೀಸ್ ತನಿಖೆ ಆರಂಭವಾಗಲಿದೆ ಎಂದು ತಿಳಿದುಬಂದಿದೆ.
ಇನ್ನೊಂದೆಡೆ ಮಂಗಳೂರಿನಿಂದ ಎಫ್ ಎಸ್ ಎಲ್ ತಂಡ ಆಗಮಿಸಿದ್ದು ಅಗತ್ಯ ಪ್ರಕ್ರಿಯೆ ಕೈಗೊಂಡಿದೆ.ಪಂಚನಾಮೆ ಬಳಿಕ ಉಡುಪಿಯಲ್ಲಿ ಶವದ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ.
PublicNext
13/04/2022 08:35 am