ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಸಾಲಬಾಧೆಯಿಂದ ಯುವಕ ಆತ್ಮಹತ್ಯೆಗೆ ಶರಣು

ಮಂಗಳೂರು: ಸಾಲಬಾಧೆಯಿಂದ ಯುವಕನೋರ್ವನು ಎನ್ಐಟಿಕೆ ಬಳಿಯ ಮಲ್ಲಮ್ಮಾರ್ ಬೀಚ್ ನಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ಸುರತ್ಕಲ್ ಆಶ್ರಯ ಕಾಲನಿ ಮೂರನೇ ಬ್ಲಾಕ್ ನಿವಾಸಿ ಕ್ಯಾಂಡ್ರಿಕ್ ಲಾರೆನ್ಸ್ ಡಿಸೋಜ(20) ಆತ್ಮಹತ್ಯೆ ಮಾಡಿಕೊಂಡ ಯುವಕ

ಈತ ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟು ಸಮುದ್ರಕ್ಕೆ ಹಾರಿ ಮೃತಪಟ್ಟಿದ್ದಾನೆ. ''ಈ ಆತ್ಮಹತ್ಯೆಗೆ ನಾನೇ ಕಾರಣ. ನಾನು ಸುಮಾರಷ್ಟು ಮಂದಿಯಿಂದ ಸಾಲ ಮಾಡಿಕೊಂಡಿದ್ದೇನೆ. ಇದೀಗ ಈ ಸಾಲವನ್ನು ತೀರಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದೇನೆ" ಎಂದು ಡೆತ್ ನೋಟ್ ಬರೆದಿದ್ದಾರೆ. ಈ ಬಗ್ಗೆ ಸುರತ್ಕಲ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

11/04/2022 10:48 pm

Cinque Terre

15.46 K

Cinque Terre

3

ಸಂಬಂಧಿತ ಸುದ್ದಿ