ವಿಟ್ಲ: ಮಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ಕೊಡಾಜೆ ಎಂಬಲ್ಲಿ ನೌಫಲ್ ಟಿಂಬರ್ ನ ಎದುರುಗಡೆ ಗುಡ್ಡೆಯಲ್ಲಿ ವ್ಯಕ್ತಿಯೋರ್ವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.
ಸುಮಾರು 15 ದಿನಗಳ ಹಿಂದೆ ನೇಣು ಬಿಗಿದ ರೀತಿಯಲ್ಲಿ ಶವ ಪತ್ತೆಯಾಗಿದ್ದು, ಶವ ಕೊಳೆತು ಹೋಗಿದ್ದು, ಅಸ್ಥಿ ಎಲ್ಲಾ ಹೊರಗೆ ಬಂದು ಗುರುತು ಸಿಗದ ರೀತಿಯಲ್ಲಿ ಪತ್ತೆಯಾಗಿದೆ. ಜೆಸಿಬಿ ಕೆಲಸದವರೊಬ್ಬರು ಮೂತ್ರ ವಿಸರ್ಜನೆಗೆಂದು ತೆರಳಿದಾಗ ಹೆಣ ನೋಡಿ ವಿಟ್ಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ ವಿಟ್ಲ ಪೊಲೀಸರು ಕೊಳೆತು ವಾಸನೆ ಬರುತ್ತಿದ್ದ ಶವವನ್ನು ಫ್ರೆಂಡ್ಸ್ ವಿಟ್ಲ ತಂಡದ ಮುರಳೀಧರ ಮತ್ತು ಪ್ರವೀಣ್ ಅನಂತಾಡಿ ಮತ್ತು ಸ್ಥಳೀಯರ ಸಹಕಾರದಿಂದ ತೆಗೆದು ದೇರಳಕಟ್ಟೆ ಶವಾಗಾರಕ್ಕೆ ಕಳುಹಿಸಲಾಗಿದೆ.
ವಿಟ್ಲ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಮೃತರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ವಿಟ್ಲ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಪೊಲೀಸರು ತಿಳಿಸಿದ್ದಾರೆ.
ವಿಟ್ಲ ಪೊಲೀಸರನ್ನು ಸಂಪರ್ಕಿಸಲು 08255-2392339480805369ಕ್ಕೆ ಕರೆಮಾಡಿ
Kshetra Samachara
11/04/2022 10:19 pm