ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಜಪೆ ಪೊಲೀಸರಿಂದ ದನ ಕಳವು ಆರೋಪಿ ಬಂಧನ

ಬಜಪೆ : ಮೇಯಲು ಬಿಟ್ಟಿದ್ದ ದನಗಳನ್ನು ಕಳವು ಮಾಡಿದ್ದ ವ್ಯಕ್ತಿಯೊಬ್ಬನನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ. ಜೋಕಟ್ಟೆಯ ಪಂಚಾಯತ್ ಗುಡ್ಡೆ ಹೌಸ್ ನಿವಾಸಿ ಮೊಹಮ್ಮದ್ ರಾಝಿಕ್ (19) ಬಂಧಿತ ಆರೋಪಿಯಾಗಿದ್ದಾನೆ.

ಮರವೂರಿನ ಕಪಿಲ ಪಾರ್ಕ್ ಜಾನುವಾರು ಗೋ ಶಾಲೆ ಯಲ್ಲಿ ಮೇಯಲು ಬಿಟ್ಟ ಜಾನುವಾರುಗಳ ಪೈಕಿ ಒಂದು ಹೋರಿ ಮತ್ತು ಕಪಿಲ ತಳಿಯ 2 ಹಸುಗಳು ಕಳವು ಆದ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣೆಸಿದ ಬಜಪೆ ಪೊಲೀಸ್ ನಿರೀಕ್ಷಕರ ತಂಡ ಕೆಂಜಾರು ಮಳವೂರು ಬಳಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದು,ಉಳಿದ ಆರೋಪಿಗಳ ಪತ್ತೆಯ ಬಗ್ಗೆ ಬಜಪೆ ಪೊಲೀಸ್ ನಿರೀಕ್ಷಕರ ತಂಡ ತೀವ್ರ ಶೋಧ ಕಾರ್ಯಾಚರಣೆಯನ್ನು ಮುಂದುವರಿಸಿದೆ.

Edited By : Nirmala Aralikatti
Kshetra Samachara

Kshetra Samachara

11/04/2022 08:42 pm

Cinque Terre

9.99 K

Cinque Terre

3

ಸಂಬಂಧಿತ ಸುದ್ದಿ