ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಬಾವಿಗೆ ಹಾರಿದ ಮಾನಸಿಕ ಅಸ್ವಸ್ಥ, ಪ್ರಾಣಾಪಾಯದಿಂದ ಪಾರು

ಉಡುಪಿ: ಬಾವಿಗೆ ಹಾರಿ ಆತ್ಮಹತ್ಯೆ ಮಾಡಲೆತ್ನಿಸಿದ ವ್ಯಕ್ತಿಯನ್ನು ನಗರ ಪೋಲಿಸ್ ಠಾಣೆ, ಅಗ್ನಿಶಾಮಕ ದಳ ಜಂಟಿ ಕಾರ್ಯಚರಣೆ ಮೂಲಕ ರಕ್ಷಿಸಿದೆ. ಇಂದು ಮುಂಜಾನೆ ಈ ಘಟನೆ ನಡೆದಿದ್ದು, ಈತ ಪೆರಂಪಳ್ಳಿ ಬೊಬ್ಬರ್ಯಕಟ್ಟೆ ನಿವಾಸಿ ಶಂಕರ ಬಸಪ್ಪ ವಡ್ಡಾರ ಎಂಬ ಮಾನಸಿಕ ಅಸ್ವಸ್ಥ ಎಂದು ಗುರುತಿಸಲಾಗಿದೆ.

ಬೆಳಗಿನ ಜಾವ ಈ ಘಟನೆ ನಡೆದಿದ್ದು ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಗೆ ಸುದ್ದಿ ಮುಟ್ಟಿಸಲಾಯಿತು.ತಕ್ಷಣ ಕಾರ್ಯಾಚರಣೆ ನಡೆಸಿ ಶಂಕರ ಬಸಪ್ಪ ಅವರನ್ನು ರಕ್ಷಿಸಲಾಯಿತು. ಸಮಾಜಸೇವಕ ನಿತ್ಯಾನಂದ ಒಳಕಾಡು ಮತ್ತು ನಗರಸಭೆ ಸದಸ್ಯ ಗಿರೀಶ್ ಅಂಚನ್ ಕಾರ್ಯಾಚರಣೆ ಸಂದರ್ಭ ಸಹಕರಿಸಿದರು.

Edited By : Shivu K
Kshetra Samachara

Kshetra Samachara

07/04/2022 01:20 pm

Cinque Terre

37.55 K

Cinque Terre

0

ಸಂಬಂಧಿತ ಸುದ್ದಿ