ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ: ಐಷಾರಾಮಿ ಕಾರಲ್ಲೇ ಗೋಕಳ್ಳತನ: ಗೋಕಳ್ಳರ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆ!

ಕಾರ್ಕಳ: ಕಾರ್ಕಳದಲ್ಲಿ ಮತ್ತೆ ಗೋಕಳ್ಳರು ಅಟ್ಟಹಾಸ ಮೆರೆದಿದ್ದಾರೆ. ಗೋವನ್ನು ಕಳ್ಳತನ ಮಾಡುವ ಕಳ್ಳರ ಕೃತ್ಯವೊಂದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕಾನೂನು-ಸುವ್ಯವಸ್ಥೆಗೆ ಸವಾಲೆಸೆಯುವ ರೀತಿಯಲ್ಲಿ ರಾಜಾರೋಷವಾಗಿ ದನಕಳ್ಳತನ ಕೃತ್ಯವು ಇಂದು ಬೆಳಗ್ಗಿನ ಜಾವ 2.45ಕ್ಕೆ ಕಂಡು ಬಂದಿದೆ.

ಕಾರ್ಕಳದ ಬಂಗ್ಲೆಗುಡ್ಡೆಯ ವಿದ್ಯಾ ಸರಸ್ವತಿ ಮಂದಿರದ ಆವರಣದಲ್ಲಿದ್ದ ದನಗಳನ್ನು ಗೋಕಳ್ಳರು ಕಳ್ಳತನ ಮಾಡಿದ್ದಾರೆ. ಐಷಾರಾಮಿ ಕಾರುಗಳನ್ನು ಬಳಸಿ ದನ ಕಳ್ಳತನ ಮಾಡುತ್ತಿರುವ ಈ ದೃಶ್ಯ ಸದ್ಯ ವೈರಲ್ ಆಗಿದೆ.ಇಷ್ಟೊಂದು ಕಠಿಣ ಕಾನೂನು ಚಾಲ್ತಿಯಲ್ಲಿದ್ದರೂ ಗೋಕಳ್ಳತನ ತಡೆಯುವಲ್ಲಿ ಸರಕಾರದ ವೈಫಲ್ಯತೆಗೆ ಹಿಂದೂ ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Edited By : Nagesh Gaonkar
PublicNext

PublicNext

02/04/2022 03:33 pm

Cinque Terre

52.87 K

Cinque Terre

9

ಸಂಬಂಧಿತ ಸುದ್ದಿ