ಪಡುಬಿದ್ರೆ : ಮಾಡೆಲಿಂಗ್ ಕ್ಷೇತ್ರದಲ್ಲಿ ಅವಕಾಶ ಕಲ್ಪಿಸುವುದಾಗಿ ನಂಬಿಸಿ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರಿಗೆ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಸೆಡ್ರಿಕ್ ಕುಟಿನ್ಹೋ 2019ರ ಮಾರ್ಚ್‌ನಿಂದ ವರ್ಕ್ ಫ್ರಮ್ ಹೋಮ್ ಕೆಲಸ ಮಾಡಿಕೊಂಡಿದ್ದರು. ಆರೋಪಿಗಳಾದ ಮುಂಬೈಯ ಪ್ರಿಯಾಂಕ, ಪೂನಮ್, ಜೆನ್ನಿಫರ್, ಮುಖೇಶ್, ಮೋಹನ್ ಜಿ. ಎಂಬವರು ಸೆಡ್ರಿಕ್ ಕುಟಿನ್ಹೋಗೆ ಮಾಡೆಲಿಂಗ್ ಕ್ಷೇತ್ರದಲ್ಲಿ ಅವಕಾಶ ಕಲ್ಪಿಸುವುದಾಗಿ ನಂಬಿಸಿದ್ದರು.
ಅದರಂತೆ ಆರೋಪಿಗಳು 2022ರ ಫೆ.10ರಿಂದ ಮಾ.28ರವರೆಗೆ ಬೇರೆ ಬೇರೆ ದಿನಗಳಲ್ಲಿ ಸೆಡ್ರಿಕ್‌ಗೆ ಕರೆ ಮಾಡಿ ನಂಬಿಸಿ, ಅವರ ಬ್ಯಾಂಕ್ ಖಾತೆಯಿಂದ ತಮ್ಮ ಬ್ಯಾಂಕ್ ಖಾತೆಗೆ ಒಟ್ಟು 27,95,000 ರೂ. ಹಣ ಜಮಾ ಮಾಡಿಸಿ ಮೋಸ ಮಾಡಿದ್ದಾರೆ ಎಂದು ಹಣ ಕಳೆದುಕೊಂಡವರು ದೂರು ದಾಖಲಿಸಿದ್ದಾರೆ.
Kshetra Samachara
30/03/2022 06:36 pm