ಸುಬ್ರಹ್ಮಣ್ಯ: ದೇಶದ ಪ್ರಸಿದ್ಧ ಕಾರಣಿಕದ ನಾಗಕ್ಷೇತ್ರ ಶ್ರೀ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಾರ್ಚ್ 23 ರ ಬೆಳಗ್ಗೆ ಗೋಕಳ್ಳತನಕ್ಕೆ ಯತ್ನ ನಡೆದಿರೋದು ಇದೀಗ ಬೆಳಕಿಗೆ ಬಂದಿದೆ.
ಬಿಡಾಡಿ ಗೋವನ್ನು ಐಷಾರಾಮಿ ಇನ್ನೋವಾ ಕಾರ್ ನಲ್ಲಿ ತುಂಬಿಸಿ ಕದ್ದೊಯ್ಯಲು ಗೋಕಳ್ಳರು ಯತ್ನಿಸಿರುವ ಘಟನೆ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಸುಬ್ರಹ್ಮಣ್ಯ ದೇವಾಲಯದ ವಠಾರದ ಪಾರ್ಕಿಂಗ್ ಜಾಗದಿಂದ ಆಂಜನೇಯ ಗುಡಿಯ ಹಿಂಭಾಗದಲ್ಲಿ ಬಸ್ ಸಮೀಪ ಮಲಗಿದ್ದ ಗೋವೊಂದನ್ನು ಹಿಡಿದು ಇನ್ನೋವಾ ಕಾರಿನಲ್ಲಿ ತುಂಬಿಸಿ ಕದ್ದೊಯ್ಯಲು ಯತ್ನಿಸಿದ್ದಾರೆ. ಮಾರ್ಚ್ 25 ರಂದು ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ರಾಜ್ಯದ ಅತೀ ಶ್ರೀಮಂತ ದೇವಸ್ದಾನದಲ್ಲೇ ಈ ರೀತಿ ಗೋವು ಕಳ್ಳತನಕ್ಕೆ ವಿಫಲ ಯತ್ನ ನಡೆದಿರುವುದು ಅಲ್ಲಿನ ಭದ್ರತಾ ವೈಫಲ್ಯದ ಬಗ್ಗೆ ಅನುಮಾನ ಮೂಡಿಸಿದೆ. ಗೋವು ಕಳ್ಳತನ ನಡೆಸಿ ಅಲ್ಲಿಂದ ತಪ್ಪಿಸಿಕೊಳ್ಳುವಾಗ ಪೊಲೀಸ್ ತಪಾಸಣೆ ಇರುವುದಿಲ್ಲವೇ ಎನ್ನುವ ಅನುಮಾನ ಸಾರ್ವಜನಿಕ ವಲಯದಲ್ಲಿ ಸೃಷ್ಟಿಯಾಗಿದೆ.
Kshetra Samachara
26/03/2022 09:38 pm