ಉಡುಪಿ: ವೃದ್ಧರೊಬ್ಬರ ಶವವು ಕೊಳೆತ ಸ್ಥಿತಿಯಲ್ಲಿ ಕಾಡಬೆಟ್ಟುವಿನಲ್ಲಿರುವ ಅವರ ಮನೆಯಲ್ಲೇ ಪತ್ತೆಯಾದ ಘಟನೆ ಸಂಭವಿಸಿದೆ. ವೃದ್ಧರನ್ನು ಹರಿಶ್ಚಂದ್ರ ಪೂಜಾರಿ (70) ಎಂದು ಗುರುತಿಸಲಾಗಿದೆ. ಇವರು ಮೃತಪಟ್ಟು ಮೂರು ದಿನಗಳು ಕಳೆದಿರಬಹುದೆಂದು ಅಂದಾಜಿಸಲಾಗಿದೆ.
ಆಶ್ಚರ್ಯ ಎಂದರೆ ಮನೆಯಲ್ಲಿದ್ದ ಅನಾರೋಗ್ಯಪೀಡಿತ ವೃದ್ಧೆ ಮತ್ತು ಮಹಿಳೆ, ಕೊಳೆತ ಶವದೊಂದಿಗೆ ಮೂರು ದಿನಗಳನ್ನು ಕಳೆದಿದ್ದಾರೆ. ವಾಸನೆ ಹಬ್ಬಿದ್ದರಿಂದ ಸ್ಥಳೀಯರಿಗೆ ವಿಷಯ ಗೊತ್ತಾಗಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.
ಉಡುಪಿ ಠಾಣೆ ನಿರೀಕ್ಷಕ ಪ್ರಮೋದ್ ಪಿ, ಠಾಣಾಧಿಕಾರಿ ಮಹೇಶ್, ತನಿಖಾ ಸಹಾಯಕ ವಿಶ್ವನಾಥ್ ಶೆಟ್ಟಿ ಅಮಾಸೆಬೈಲು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.ಮೃತದೇಹವನ್ನು ವೈದ್ಯಕೀಯ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ಸಾಗಿಸಲು ಸಮಾಜಸೇವಕ ನಿತ್ಯಾನಂದ ಒಳಕಾಡು, ಸಂದೀಪ್ ಕುಮಾರ್, ಮಹೇಶ್ ಪೂಜಾರಿ ಶಿರಿಬೀಡು ಸಹಕರಿಸಿದರು.
Kshetra Samachara
26/03/2022 04:08 pm