ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಪಾನ್‌ಕಾರ್ಡ್‌ ಲಿಂಕ್ ಕಳುಹಿಸಿ 1.23 ಲಕ್ಷ ಹಣ ಡ್ರಾ : ದೂರು ದಾಖಲು

ಉಡುಪಿ: ಬ್ಯಾಂಕ್ ಅಧಿಕಾರಿಗಳ ಸೋಗಿನಲ್ಲಿ ನಕಲಿ ಪಾನ್‌ಕಾರ್ಡ್‌ ಅಪ್‌ಡೇಟ್ ಲಿಂಕ್ ಕಳುಹಿಸಿ ಆನ್ ಲೈನ್ ಮೂಲಕ ಬ್ಯಾಂಕ್ ಖಾತೆಗೆ ಕನ್ನ ಹಾಕಿದ ಘಟನೆ ಬೆಳಕಿಗೆ ಬಂದಿದೆ.

ಚಿಟ್ಪಾಡಿ ನಿವಾಸಿ ಆನೆಟ್ ಡಿ'ಸೋಜಾ ಅವರ ಮೊಬೈಲ್ ಪಾನ್ ಕಾರ್ಡ್ ಅಪ್ ಡೇಟ್ ಮಾಡಿಕೊಳ್ಳುವ ಬಗ್ಗೆ

ಎಸ್ ಎಂಎಸ್ ಬಂದಿದ್ದು, ಅವರು ಲಿಂಕ್ ಒತ್ತಿ ಪಾನ್‌ಕಾರ್ಡ್ ಅಪ್ ಡೇಟ್ ಮಾಡಿ ಅನಂತರ ಮೊಬೈಲ್ ಗೆ ಬಂದ ಒಟಿಪಿಯನ್ನು ಅದರಲ್ಲಿ ನಮೂದಿಸಿದ್ದಾರೆ.

ಕೂಡಲೇ ಎಸ್ ಬಿಐ ಖಾತೆಯಿಂದ ಹಂತ-ಹಂತವಾಗಿ 1.23 ಲಕ್ಷ ರೂ. ಹಣ ಕಡಿತಗೊಂಡಿದೆ. ಆನೆಟ್ ಅವರು ನ್ಯಾಷನಲ್ ಸೈಬರ್ ಕೈಂ ಪೋರ್ಟಲ್‌ ಗೆ ಮಾಹಿತಿ ನೀಡಿದ್ದು, 81 ಸಾವಿರ ರೂ. ಹಣ ಖಾತೆಗೆ ಮರು ಪಾವತಿಯಾಗಿದೆ. 25 ಸಾವಿರ ರೂ. ವರ್ಗಾವಣೆಗೊಂಡ ಖಾತೆಯಲ್ಲಿಯೇ ಸ್ಥಗಿತಗೊಂಡಿದೆ. 17 ಸಾವಿರ ರೂ. ಹಣ ಬಾಕಿ ಇರುವುದಾಗಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಅವರು ಪ್ರಕರಣ ದಾಖಲಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

21/03/2022 03:00 pm

Cinque Terre

14.47 K

Cinque Terre

0

ಸಂಬಂಧಿತ ಸುದ್ದಿ