ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಎಟಿಎಂನಿಂದ ಹಣ ಕಳವಿಗೆ ವಿಫಲ ಯತ್ನ- ದೂರು ದಾಖಲು

ಅಂಬಾಗಿಲು: ಉಡುಪಿಯಲ್ಲಿ ದುಷ್ಕರ್ಮಿಗಳು ಎಟಿಎಂನಿಂದ ಹಣ ಕಳವು ಮಾಡಲು ವಿಫಲ ಯತ್ನ ನಡೆಸಿದ ಘಟನೆ ನಡೆದಿದೆ.

ಉಡುಪಿಯ ಅಂಬಾಗಿಲು ಪೆರಂಪಳ್ಳಿ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಎಟಿಎಂನಲ್ಲಿ ಮಾ.7 ಹಾಗೂ ಮಾ.8 ರ ನಡುವಿನ ಅವಧಿಯಲ್ಲಿ

ಹಣ ಕಳವಿಗೆ ವಿಫಲ ಯತ್ನ ನಡೆದಿದೆ. ರಾತ್ರಿ ವೇಳೆ ಅಂಬಾಗಿಲು ಪೆರಂಪಳ್ಳಿ ಕ್ರಾಸ್‌ನ ಕೆನರಾ ಬ್ಯಾಂಕ್ ಎಟಿಎಂ ಗೆ ನುಗ್ಗಿದ ಕಳ್ಳರು ಹಣವನ್ನು ಕಳವು ಮಾಡುವ ಉದ್ದೇಶದಿಂದ ಎಟಿಎಂ ಲಾಕರ್ ಡೋರ್ ಅನ್ನು ಮುರಿದು ಹಣ ಕಳವು ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಕಳ್ಳರ ಕೃತ್ಯ ಫಲಿಸದಾಗ ಅಲ್ಲಿಂದ ಪರಾರಿಯಾಗಿದ್ದಾರೆ. ಈ ಬಗ್ಗೆ ಎಲೆಕ್ಟ್ರಾನಿಕ್ ಪೇಮೆಂಟ್ ಸರ್ವಿಸ್ ಲಿ. ಸಂಸ್ಥೆಯಲ್ಲಿ ವ್ಯವಸ್ಥಾಪಕ ನಿರ್ದೇಶಕರು ಸೈನಲ್ ನೀಡಿರುವ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Vijay Kumar
Kshetra Samachara

Kshetra Samachara

09/03/2022 03:15 pm

Cinque Terre

6.84 K

Cinque Terre

0

ಸಂಬಂಧಿತ ಸುದ್ದಿ