ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಮಾನಂಪಾಡಿ: ಯುವಕ ನೇಣುಬಿಗಿದು ಆತ್ಮಹತ್ಯೆ

ಮುಲ್ಕಿ: ಮುಲ್ಕಿ ಸಮೀಪದ ಮಾನಂಪಾಡಿ ಅಮನ್ ತೋಟ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿದ್ದ ಲಕ್ಷ್ಮಣ ಸುವರ್ಣ ಎಂಬವರ ಪುತ್ರ ಲವೇಶ್ ಕೋಟ್ಯಾನ್ (25) ಮನೆಯ ಮಹಡಿಯ ಕೋಣೆಯಲ್ಲಿ ಸೋಮವಾರ ಬೆಳಿಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೃತ ಲವೇಶ್ ಕೋಟ್ಯಾನ್ ಪದವೀಧರನಾಗಿದ್ದು ಕಳೆದ ದಿನಗಳ ಹಿಂದೆ ವಿದೇಶಕ್ಕೆ ಗುತ್ತಿಗೆ ಆಧಾರದಲ್ಲಿ ಶಡ್ ಡೌನ್ ಕೆಲಸಕ್ಕೆ ಹೋಗಿಬಂದಿದ್ದು ಊರಿನಲ್ಲಿ ಕ್ಯಾಟರಿಂಗ್ ಕೆಲಸ ಮಾಡಿಕೊಂಡು ಎಲ್ಲರೊಂದಿಗೆ ಆತ್ಮೀಯ ಒಡನಾಟದಲ್ಲಿದ್ದ.

ಆದರೆ ರಾತ್ರಿ ಮನೆಯಲ್ಲಿ ಊಟ ಮಾಡಿ ಮಹಡಿಯ ಕೋಣೆಯಲ್ಲಿ ಮಲಗಿದ್ದು ಬೆಳಗಿನ ಜಾವ ಸುಮಾರು ಆರು ಗಂಟೆ ಹೊತ್ತಿಗೆ ಏಕಾಏಕಿ ಕೋಣೆಯ ಫ್ಯಾನ್ ಗೆ ಸೀರೆ ಬಿಗಿದು ನೇಣು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬೆಳಗಿನ ಜಾವ ಕೋಣೆಯಿಂದ ಇನ್ನೂ ಮಗ ಹೊರಗೆ ಬರದೇ ಇರುವುದನ್ನು ಗಮನಿಸಿ ಸಂಶಯದಿಂದ ತಾಯಿ ವನಜ ಕೋಣೆಯ ಬಾಗಿಲು ಸರಿಸಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಮುಲ್ಕಿಯ ಕಾರ್ನಾಡ್ ಹರಿಹರ ಬಳಿಯ ನಿವಾಸಿ ಗಳಾದ ಲಕ್ಷ್ಮಣ್ ಕಳೆದ 2 ವರ್ಷಗಳ ಹಿಂದೆ ಮಾನಂಪಾಡಿ ಯಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು.

ಮಾನಸಿಕ ಖಿನ್ನತೆ ಆತ್ಮಹತ್ಯೆಗೆ ಕಾರಣ ಎಂದು ತಿಳಿದುಬಂದಿದೆ ಮುಲ್ಕಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Edited By : Shivu K
Kshetra Samachara

Kshetra Samachara

07/03/2022 11:53 am

Cinque Terre

21.78 K

Cinque Terre

5