ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ: ಜಾಗದ ತಕರಾರು- ತಮ್ಮನಿಂದಲೇ ಅಣ್ಣನ ಕೊಲೆ

ಕಾರ್ಕಳ: ತಮ್ಮನೊಬ್ಬ ಅಣ್ಣನನ್ನು ಚೂರಿಯಿಂದ ಇರಿದು ಕೊಲೆಗೈದ ಘಟನೆ ಕಾರ್ಕಳ ತಾಲೂಕಿನ ನಿಟ್ಟೆಯ ಬಜಕಳ ಎಂಬಲ್ಲಿ ನಡೆದಿದೆ.

ಶೇಖರ್(50) ಕೊಲೆಗೀಡಾದವರು. ಶೇಖರ್ ಸಹೋದರ ರಾಜು(35) ಕೊಲೆಗೈದ ಆರೋಪಿ. ಶೇಖರ್ ಮತ್ತು ರಾಜು ಸಹೋದರರು, ಇವರಿಬ್ಬರು ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ತಾಯಿಗೆ ಮಂಜೂರಾದ ಭೂಮಿಯಲ್ಲಿ ಅಣ್ಣ ಶೇಖರ ವಾಸವಾಗಿದ್ದ. ಅಣ್ಣನೊಂದಿಗೆ ವೈಮನಸ್ಸಿನಿಂದ ರಾಜು ಪ್ರತ್ಯೇಕ ಶೆಡ್ ನಿರ್ಮಾಣ ಮಾಡಿಕೊಂಡು ವಾಸವಾಗಿದ್ದ. ನಿನ್ನೆ ಶೇಖರ ಮನೆಯಲ್ಲಿ ಅಂಗಳದ ಕಾಮಗಾರಿ ನಡೆಯುತ್ತಿತ್ತು. ಅಲ್ಲಿಗೆ ಪಾನಮತ್ತನಾಗಿ ಆಗಮಿಸಿದ ರಾಜು ಮನೆಯಲ್ಲಿ ದುರಸ್ತಿ ಕೆಲಸ ನಿರ್ವಹಿಸದಂತೆ ಆಕ್ಷೇಪಿಸಿದ್ದಾನೆ. ನಂತರ ರಾಜು ಚೂರಿಯನ್ನು ತಂದು ಅಣ್ಣನ ಕುತ್ತಿಗೆ ಮತ್ತು ಹೊಟ್ಟೆಯ ಭಾಗಕ್ಕೆ ತಿವಿದಿದ್ದಾನೆಂದು ಆರೋಪಿಸಲಾಗಿದೆ. ಅತೀವ ರಕ್ತಸ್ರಾವದಿಂದ ಶೇಖರ ಮೃತಪಟ್ಟಿದ್ದಾರೆ .ಆರೋಪಿ ಪರಾರಿಯಾಗಿದ್ದು, ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Vijay Kumar
Kshetra Samachara

Kshetra Samachara

07/03/2022 11:42 am

Cinque Terre

15.33 K

Cinque Terre

1

ಸಂಬಂಧಿತ ಸುದ್ದಿ