ಉಡುಪಿ: ಸುಮಾರು 15 ವರ್ಷ ಸಂಸಾರ ನಡೆಸಿ ಮೊದಲನೇ ಹೆಂಡತಿಗೆ ಏಕಾಏಕಿ ತ್ರಿವಳಿ (ತ್ರಿಬಲ್) ತಲಾಖ್ ಕೊಟ್ಟು ವ್ಯಕ್ತಿಯೊಬ್ಬ ಎರಡನೇ ಮದುವೆಯಾದ ಘಟನೆ ನಡೆದಿದೆ. ಮೋಸ ಮಾಡಿದ ಪತಿ ಹಾಗೂ ಆತನ ಮನೆಯವರ ವಿರುದ್ಧ ಉಡುಪಿ ಮಹಿಳಾ ಠಾಣೆಯಲ್ಲಿ ನೊಂದ ಮಹಿಳೆ ದೂರು ದಾಖಲಿಸಿದ್ದಾರೆ.
ಅಂಬಾಗಿಲಿನ ನಿವಾಸಿ ಉಸ್ಮಾನ್ ಅವರ ಪುತ್ರಿ ಶಹನಾಝ್ ಅವರ ವಿವಾಹವು 2006ರಲ್ಲಿತೆಂಕ ಎರ್ಮಾಳಿನ ಮಯ್ಯದ್ದಿ ಅವರ ಪುತ್ರ ಮೊಹಮ್ಮದ್ ಯುಸೂಫ್‌ನೊಂದಿಗೆ ನಡೆದಿತ್ತು. ಅವರಿಗೆ ಗಂಡು ಮಗುವಿದೆ. ಅನಂತರ ಆರೋಪಿ ಯುಸೂಫ್ ಆಗಾಗ್ಗೆ ಪತ್ನಿಗೆ ಹಣ ತೆಗೆದುಕೊಂಡು ಬಾ, ಇಲ್ಲದಿದ್ದಲ್ಲಿ ನಮ್ಮ ಮನೆಯಲ್ಲಿ ನಿನಗೆ ಜಾಗ ಇಲ್ಲ ಎಂದು ಪೀಡಿಸಿ ಹಲ್ಲೆ ನಡೆಸುತ್ತಿದ್ದ. ಅನಂತರ ಶಹನಾಝ್ ತನ್ನ ತಂದೆ ಮನೆಯಲ್ಲೇ ವಾಸವಾಗಿದ್ದರು.
ಈ ವರ್ಷ ಆರೋಪಿ ಯುಸೂಫ್, ಶಹನಾಝ್ ತಂದೆಯವರಲ್ಲಿ ನಿಮ್ಮ ಮಗಳಿಗೆ ತ್ರಿಬಲ್ ತಲಾಖ್ ನೀಡುತ್ತಿದ್ದೇನೆ. ನಾನು ಕೃಷ್ಣಾಪುರದ ಝೀನತ್‌ನೊಂದಿಗೆ ಮದುವೆ ಯಾಗಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ತ್ರಿಬಲ್ ತಲಾಕ್ ಮೂಲಕ ಮೋಸ ಆಗಿದ್ದು, ಇದಕ್ಕೆ ಆರೋಪಿ ಯುಸೂಫ್ ಮತ್ತು ಅವನ 2ನೇ ಮದುವೆಗೆ ಸಹಕರಿಸಿದ ಅಲ್ತಾಫ್, ಸಿರಾಜ್, ಆಯಿಷಾ, ನಫೀಸಾ, ಹಸನ್ ಮತ್ತು ಝೀನತ್ ವಿರುದ್ಧ ಶಹನಾಝ್ ಅವರು ದೂರು ನೀಡಿದ್ದಾರೆ.
Kshetra Samachara
05/03/2022 12:47 pm