ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಲಕ್ಷಾಂತರ ರೂ. ದುರುಪಯೋಗ- ಅಪರಾಧಿಗೆ 3 ವರ್ಷ 6 ತಿಂಗಳು ಜೈಲು, 12 ಲಕ್ಷ ರೂ. ದಂಡ

ಮಂಗಳೂರು: ತಾನು ಕೆಲಸ ಮಾಡುತ್ತಿದ್ದ ಸಂಸ್ಥೆಯ ಲಕ್ಷಾಂತರ ರೂಪಾಯಿಯನ್ನು ದುರುಪಯೋಗ ಪಡಿಸಿರುವ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ 2ನೇ ಸಿಜೆಎಂಸಿ ನ್ಯಾಯಾಲಯವು 3 ವರ್ಷ 6 ತಿಂಗಳ ಕಠಿಣ ಶಿಕ್ಷೆ ವಿಧಿಸಿ 12 ಲಕ್ಷ ರೂ.ದಂಡ ವಿಧಿಸಿ ಆದೇಶಿಸಿದೆ.

ಮಂಗಳೂರು ನಗರದ ಕೊಡಿಯಾಲಬೈಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜೆಟ್ ಏರ್ ಲಿ. ಸಂಸ್ಥೆಯಲ್ಲಿ ಹಿರಿಯ ಅಧಿಕಾರಿಯಾಗಿ ಅಪರಾಧಿ ವರದರಾಯ ನಾಯಕ್ ಕಾರ್ಯ ನಿರ್ವಹಿಸುತ್ತಿದ್ದ. ಈತ ತಾನು ಕೆಲಸ ಮಾಡುತ್ತಿದ್ದ 1993-1999ರ ಸಮಯದ ನಡುವೆ ಇದೇ ಸಂಸ್ಥೆಯಿಂದ ಒಟ್ಟು 18,78,507 ರೂ. ವನ್ನು ದುರ್ಬಳಕೆ ಮಾಡಿದ್ದ. ಈ ಬಗ್ಗೆ ಜೆಟ್ ಏರ್ ಲಿ. ಸಂಸ್ಥೆಯ ವ್ಯವಸ್ಥಾಪಕ ಆರ್. ಪ್ರಮೋದ್ ಬಂದರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಪೊಲೀಸ್ ನಿರೀಕ್ಷಕ ಬಿ.ಎಸ್.ಶ್ರೀನಿವಾಸ ಆರೋಪಿಯ ವಿರುದ್ಧ ಆರು ಪ್ರತ್ಯಕ ದೋಷಾರೋಪಣೆ ಪತ್ರವನ್ನು ಸಲ್ಲಿಸಿದ್ದರು.

ಪ್ರಕರಣವನ್ನು ಕೈಗೆತ್ತಿಕೊಂಡ ವಿಚಾರಣೆ ನಡೆಸಿ 2ನೇ ಸಿಜೆಎಂಸಿ ನ್ಯಾಯಾಲಯ ವಾದ - ವಿವಾದವನ್ನು ಆಲಿಸಿ ಆರೋಪಿ ವರದರಾಯ ನಾಯಕ್ ಮೇಲಿನ ಆರೋಪ ಸಾಬಿತಾಗಿದೆ ಎಂದು ಘೋಷಿದಿದೆ‌. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶೆ ಶಿಲ್ಪಾ ಎ.ಜಿ. ಅಪರಾಧಿಗೆ 3 ವರ್ಷ 6 ತಿಂಗಳು ಕಠಿಣ ಕಾರಾಗೃಹ ಶಿಕ್ಷೆ ಹಾಗೂ 12 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಮೋಹನ್ ಕುಮಾರ್ ಬಿ. ವಾದಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

04/03/2022 11:06 pm

Cinque Terre

9.49 K

Cinque Terre

0

ಸಂಬಂಧಿತ ಸುದ್ದಿ