ಕಡಬ: ಕಡಬ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿರಂತರವಾಗಿ ರಾತ್ರಿ ಕಳ್ಳತನ ನಡೆಯುತ್ತಿದ್ದು, ನಿನ್ನೆ ರಾತ್ರಿ ಕೂಡ ಕೊಯಿಲ ಗ್ರಾಮದ ಗಂಡಿಬಾಗಿಲಲ್ಲಿ ಮನೆಗೆ ಕಳ್ಳರು ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಮತ್ತು ನಗದು ದೋಚಿದ್ದಾರೆ.
ಗಂಡಿಬಾಗಿಲು ಮಸೀದಿ ಬಳಿಯ ನಿವಾಸಿ ಅಬೂಬಕ್ಕರ್ ಮನೆಯಲ್ಲಿ ಈ ಕೃತ್ಯ ನಡೆದಿದೆ. ರಾಮಕುಂಜ ಗ್ರಾಮದ ಆತೂರಿನ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ದ್ಸಿಕ್ರ್ ಹಲ್ಕಾ ನಡೆಯುತ್ತಿದ್ದು, ಮನೆಯವರು ಅತ್ತ ತೆರಳಿದಾಗ ಇತ್ತ ಮನೆ 'ಖಾಲಿ' ಯಾಗಿದೆ.
ರಾತ್ರಿ 11ಕ್ಕೆ ಬಂದು ಮನೆ ಬೀಗ ತೆಗೆದು ಒಳಗಡೆ ಬಂದಾಗ ಕಪಾಟ್ ನಲ್ಲಿದ್ದ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿದ್ದು, 40 ಗ್ರಾಂ ತೂಕದ ಚಿನ್ನದ ನೆಕ್ಲೇಸ್-01, 20 ಗ್ರಾಂನ ಚಿನ್ನದ ಫಿಟ್ ನೆಕ್ಲೇಸ್-01, 10 ಗ್ರಾಂ ನ 5 ಚಿನ್ನದ ಉಂಗುರ, 23 ಗ್ರಾಂ ತೂಕದ ಹೊಸ ಚಿನ್ನದ ನೆಕ್ಲೆಸ್-01 ಸಹಿತ ಒಟ್ಟು 93 ಗ್ರಾಂ ತೂಕದ ಚಿನ್ನಾಭರಣ ಹಾಗೂ 10,700 ನಗದನ್ನು ಕಳ್ಳರು ಕಳವು ಮಾಡಿದ್ದರು.
ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪುತ್ತೂರು ಡಿವೈಎಸ್ಪಿ ಗಾನಾ ಪಿ. ಕುಮಾರ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Kshetra Samachara
04/03/2022 10:22 pm