ಕುಂದಾಪುರ: ಪ್ರೀತಿಸಿ ಮದುವೆಯಾಗಿ ಬಳಿಕ ವರದಕ್ಷಿಣೆಗಾಗಿ ಚಿತ್ರಹಿಂಸೆ ನೀಡಿ ವಿಡಿಯೋ ಮಾಡಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಗಂಡನ ವಿರುದ್ಧ ಪತ್ನಿ ದೂರು ನೀಡಿದ್ದಾರೆ. ಬೀಜಾಡಿ ಗ್ರಾಮದ ಪ್ರಿಯಾಂಕ (21) ದೂರು ನೀಡಿದಾಕೆ.
ಈಕೆ ಇಲ್ಲಿನ ರಾಜು ಮೊಗವೀರ ಎಂಬವರ ಮಗಳಾಗಿದ್ದು 25/10/2021 ರಂದು ಕೊಲ್ಲೂರಿನಲ್ಲಿ ಪ್ರದೀಪ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದರು.ಮದುವೆಯ ನಂತರ ಬರೆಕಟ್ಟುವಿನಲ್ಲಿರುವ ಪ್ರದೀಪನ ಮನೆಯಲ್ಲೇ ಪತ್ನಿ ವಾಸಿಸುತ್ತಿದ್ದರು.
ದಿನ ಕಳೆದಂತೆ ಆರೋಪಿ ಗಂಡ , ಪ್ರಿಯಾಂಕರನ್ನು ಅಸಡ್ಡೆಯಿಂದ ನೋಡಿ ದೈಹಿಕ ಹಲ್ಲೆ ಮಾಡಿ ತವರು ಮನೆಯಿಂದ ವರದಕ್ಷಿಣೆ ರೂಪದಲ್ಲಿ ಚಿನ್ನ ಮತ್ತು ಹಣ ತೆಗೆದುಕೊಂಡು ಬರುವಂತೆ ಸತಾಯಿಸಿದ್ದಾನೆ. ವರದಕ್ಷಿಣೆ ತರದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ.
ಈತನ್ಮದ್ಯೆ ಆರೋಪಿ ಗರ್ಭಿಣಿ ಪತ್ನಿಗೆ ಹೊಡೆದು ಕಾಲಿನಿಂದ ತುಳಿದು ದೇಹಕ್ಕೆ ಸಿಗರೇಟಿನಿಂದ ಚುಚ್ಚಿದ್ದಾನೆ.ಇಷ್ಟೂ ಸಾಲದೆಂಬಂತೆ ಈ ಕೃತ್ಯದ ವೀಡಿಯೋ ರೆಕಾರ್ಡ್ ಮಾಡಿ ಪತ್ನಿಯ ತಂದೆ ತಾಯಿಗೆ ಕಳುಹಿಸಿ 2 ಲಕ್ಷ ರೂಪಾಯಿ ಹಣ ಹಾಗೂ 4 ಪವನ್ ಚಿನ್ನ ನೀಡುವಂತೆ ಪೀಡಿಸಿದ್ದಾನೆ.ಪತ್ನಿಗೆ ಸಿಗೇರಟಿನಿಂದ ಚುಚ್ಚಿ ಚಿತ್ರಹಿಂಸೆ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದೆ.ಇದೀಗ ಕುಂದಾಪುರ ಠಾಣೆಯಲ್ಲಿ ಗಂಡನ ವಿರುದ್ಧ ದೂರು ದಾಖಲಾಗಿದ್ದು ,ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
PublicNext
28/02/2022 10:02 pm