ಸುಳ್ಯ: ಇಲಿ ಪಾಷಾಣದಲ್ಲಿ ಹಲ್ಲುಜ್ಜಿದ ಅಸ್ವಸ್ಥಗೊಂಡು ವಾರದ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.
ಮರ್ಕಂಜ ಗ್ರಾಮದ ಬೇರಿಕೆ ರಮೇಶ ಅವರ ಪುತ್ರಿ ಶ್ರಾವ್ಯಾ (17) ಮೃತ ವಿದ್ಯಾರ್ಥಿನಿ. ಪುತ್ತೂರಿನ ಕಾಲೇಜೊಂದರಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಶ್ರಾವ್ಯಾ ವಾರದ ಹಿಂದೆ ಮನೆಯಲ್ಲಿ ಹಲ್ಲುಜ್ಜುವ ಟೂತ್‌ಪೇಸ್ಟ್ ಎಂದು ತಪ್ಪಾಗಿ ತಿಳಿದು ಇಲಿ ಪಾಷಾಣದಲ್ಲಿ ಹಲ್ಲುಜ್ಜಿದ್ದಳು. ಪರಿಣಾಮ ದೇಹದೊಳಗೆ ವಿಷ ಸೇರಿ ಆಕೆ ಅಸ್ವಸ್ಥಗೊಂಡಿದ್ದಳು. ತತ್‌ಕ್ಷಣ ವಿಷಯ ತಿಳಿದ ಮನೆ ಮಂದಿ ಆಕೆ ಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು.
ಚಿಕಿತ್ಸೆ ಫಲಿಸದೆ ಶ್ರಾವ್ಯಾ ಮೃತಪಟ್ಟಿದ್ದಾಳೆ. ಮೃತರ ತಂದೆ ನೀಡಿದ ದೂರಿನಂತೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
22/02/2022 12:39 pm