ಬಂಟ್ವಾಳ: ಸಹಕಾರಿ ಸಂಘದ ಶಟರ್ ಮುರಿದು ಬ್ಯಾಂಕಿನೊಳಗೆ ನುಗ್ಗಿದ ಕಳ್ಳರು ಬರಿಗೈಯಲ್ಲಿ ವಾಪಾಸ್ ಆಗಿದ್ದಾರೆ. ಈ ಘಟನೆ ಬಂಟ್ವಾಳದ ಸಿದ್ಧಕಟ್ಟೆ ಎಂಬಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಸಿದ್ಧಕಟ್ಟೆ ವ್ಯವಸಾಯ ಬ್ಯಾಂಕಿನ ಎದುರಿನಲ್ಲಿ ಇರುವ ಶಟರ್'ಅನ್ನು ಪಿಕ್ಕಾಸು ಬಳಸಿ ಬೀಗ ಮುರಿದು ಬ್ಯಾಂಕ್ ಒಳಗೆ ನುಗ್ಗಿದ್ದಾರೆ. ಬಳಿಕ ಬ್ಯಾಂಕ್ ಗೊದ್ರೇಜ್ ಬಾಕ್ಸ್ ಹಾಗೂ ಕ್ಯಾಶ್ ಕೌಂಟರ್'ಅನ್ನು ಜಾಲಾಡಿದ್ದಾರೆ. ಸೇಫ್ ಲಾಕರ್‌ನೊಂದಿಗೆ ಭದ್ರತೆಯ ಬ್ಯಾಂಕ್ ಆಗಿರುವುದರಿಂದ ಕಳ್ಳರಿಗೆ ಕಳ್ಳತನ ಮಾಡಲು ಸಾಧ್ಯವಾಗಿಲ್ಲ. ಬೆಳಿಗ್ಗೆ ಬ್ಯಾಂಕಿನ ಸಮೀಪದ ಅಂಗಡಿಯವರು ನೋಡಿದಾಗ ಬ್ಯಾಂಕಿನ ಶಟರ್ ಮುರಿದ ಬಗ್ಗೆ ಗಮನಕ್ಕೆ ಬಂದಿದ್ದು ಬಂಟ್ವಾಳ ಪೋಲೀಸರಿಗೆ ಮಾಹಿತಿ ನೀಡಲಾಗಿದೆ.
ಬ್ಯಾಂಕ್ ಅಧ್ಯಕ್ಷ ಪ್ರಭಾಕರ ಪ್ರಭು, ಬಂಟ್ವಾಳ ಗ್ರಾಮಾಂತರ ಪೋಲೀಸ್ ಇನ್ಸ್‌ಪೆಕ್ಟರ್ ಟಿ.ಡಿ ನಾಗರಾಜ್, ಎಸ್‌ಐ.ಹರೀಶ್, ಗ್ರಾಮಾಂತರ ಠಾಣಾ ಅಪರಾಧ ವಿಭಾಗದ ಎಸ್.ಐ ಸಂಜೀವ, ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Kshetra Samachara
18/02/2022 11:11 am