ಪಬ್ಲಿಕ್ ನೆಕ್ಸ್ಟ್ ವರದಿಯ ಬಿಗ್ ಇಂಪ್ಯಾಕ್ಟ್
ಬೈಂದೂರು : ಲೈಸೆನ್ಸ್ ಇಲ್ಲದೆ ತಮ್ಮ ಕ್ಲಿನಿಕ್ಕಿನಲ್ಲಿ ಅಲೋಪತಿ ಔಷಧಿ ದಾಸ್ತಾನು ಮಾಡಿಕೊಂಡಿದ್ದ ಉಡುಪಿ ಜಿಲ್ಲೆಯ ಬೈಂದೂರು ಹಾಗೂ ಕುಂದಾಪುರ ತಾಲೂಕಿನ ಕೆಲವು ಆಯುರ್ವೇದ ವೈದ್ಯರ ಕ್ಲಿನಿಕ್ ಮೇಲೆ ಸೋಮವಾರ ಬೆಳ್ಳಂಬೆಳಗ್ಗೆ ಡ್ರಗ್ ಕಂಟ್ರೋಲ್ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ನಿರ್ಭೀತ ವರದಿಗೆ ಹೆಸರಾದ ನಿಮ್ಮ ಪಬ್ಲಿಕ್ ನೆಕ್ಸ್ಟ್ ಭಾನುವಾರ, ಗೋಳಿಹೊಳಿ ಗ್ರಾಮದಲ್ಲಿ ನಡೆಯುತ್ತಿದ್ದ ಈ ಅಕ್ರಮ ವ್ಯವಹಾರದ ಬಗ್ಗೆ ವಿಸ್ತೃತ ವರದಿ ಮಾಡಿತ್ತು. ಇದರಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ಬೈಂದೂರು ತಾಲೂಕು ನಾಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಷಾ ಕ್ಲಿನಿಕ್ ಡಾ। ಸುರೇಶ್ ಕುಮಾರ್ ಶೆಟ್ಟಿಯವರ ಕ್ಲಿನಿಕ್ಕಿಗೆ ಆಗಮಿಸಿದ ADC ನಾಗರಾಜ್ ಕೆ.ವಿ ಅವರು ತಪಾಸಣೆ ನಡೆಸಿ, ಅಕ್ರಮ ದಾಸ್ತಾನು ಮಾಡಿದ್ದ ಸುಮಾರು 8ಲಕ್ಷಕ್ಕೂ ಮಿಕ್ಕಿದ ಅಲೋಪತಿ ಔಷಧಿಯನ್ನು ವಶಪಡಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.
ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿ ನಂಜು ನಾಯ್ಕ್ ಅವರು ತಮ್ಮ ಸಿಬ್ಬಂದಿಯೊಂದಿಗೆ ಉಪಸ್ಥಿತರಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡರು.
ಅಕ್ರಮ ಔಷಧಿ ಮಾರಾಟ ಜಾಲ ವ್ಯವಸ್ಥಿತವಾಗಿ ನಡೆದಿತ್ತು. ಇದನ್ನು ಕುಂದಾಪುರ ಹಾಗೂ ಬೈಂದೂರು ತಾಲೂಕು ವರದಿಗಾರರು ಬಯಲಿಗೆಳೆದಿದ್ದು ಗಮನಾರ್ಹ. ಆದರೆ ಆ ಮಾಧ್ಯಮಗಳ ವರದಿಗಾರರಿಗೆ ಬೆದರಿಕೆ ಹಾಕಲಾಗುತ್ತಿದ್ದು ಪೊಲೀಸರು ಸೂಕ್ತ ರಕ್ಷಣೆ ನೀಡಬೇಕೆಂದು ಕೋರಲಾಗಿದೆ.
Kshetra Samachara
14/02/2022 10:31 pm