ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿಯ ಕೋರ್ಟ್ ಆವರಣದಿಂದಲೇ ಸ್ಕೂಟರ್ ಕದ್ದೊಯ್ದರು!

ಉಡುಪಿ: ಉಡುಪಿಯ ಕೋರ್ಟ್ ಆವರಣದಲ್ಲಿ ಫೆ.5 ರಂದು ಬೆಳಗ್ಗೆ ನಿಲ್ಲಿಸಲಾದ ಸ್ಕೂಟರ್ ಕಳವಾಗಿದೆ. ಬಗ್ಗೆ ಉಡುಪಿ ಠಾಣೆಯಲ್ಲಿ ಈಗ ದೂರು ದಾಖಲಾಗಿದೆ.

ಕಲ್ಯಾಣಪುರ ಮೂಡಬೆಟ್ಟುವಿನ ರಾಜು ಅಂಚನ್ ಎಂಬವರಿಗೆ ಸೇರಿದ ಸ್ಕೂಟರ್ ಇದಾಗಿದೆ. ಅವರು ತಮ್ಮ ಪತ್ನಿಯ ಕೆಎ-20-ಇಪಿ-2096 ನಂಬರಿನ ಟಿವಿಎಸ್ ಜುಪಿಟರ್ ಸ್ಕೂಟರ್‌ನ್ನು ಕೋರ್ಟ್ ಆವರಣದಲ್ಲಿ ನಿಲ್ಲಿಸಿ, ನ್ಯಾಯಾಲಯದ ಕರ್ತವ್ಯಕ್ಕೆ ಹೋಗಿದ್ದರು.ಆದರೆ ಸಂಜೆ ಕರ್ತವ್ಯ ಮುಗಿಸಿ ವಾಪಾಸು ಬಂದು ನೋಡಿದಾಗ ಸ್ಕೂಟರ್ ಕಳವಾಗಿರುವುದು ಕಂಡು ಬಂದಿದೆ.

ಸ್ಕೂಟರ್ ಮೌಲ್ಯ 35,000ರೂ. ಎಂದು ಅಂದಾಜಿಸಲಾಗಿದೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By :
Kshetra Samachara

Kshetra Samachara

07/02/2022 08:20 pm

Cinque Terre

8.52 K

Cinque Terre

1

ಸಂಬಂಧಿತ ಸುದ್ದಿ