ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕ್ರಿಶ್ಚಿಯನ್ ಪ್ರಾರ್ಥನಾ ಮಂದಿರದ ಕಂಪೌಂಡ್ ಗೋಡೆ ಒಡೆದ ಆರೋಪ; ದೂರು ದಾಖಲು

ಮಂಗಳೂರು: ನ್ಯಾಯಾಲಯದ ತಡೆಯಾಜ್ಞೆಯನ್ನು ಉಲ್ಲಂಘನೆ ಮಾಡಿ ದೈವಸ್ಥಾನವೊಂದರ ಸೇವಾ ಸಮಿತಿಯ ಸದಸ್ಯರು ಕ್ರಿಶ್ಚಿಯನ್ ಪ್ರಾರ್ಥನಾ ಮಂದಿರದ ಕಂಪೌಂಡ್ ಗೋಡೆ ಹಾಗೂ ಮರಗಳಿಗೆ ಹಾನಿಮಾಡಿದ್ದಾರೆಂದು ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನಗರದ ಉರುಂದಾಡಿ ಗುಡ್ಡೆಯಲ್ಲಿರುವ ಸೈಂಟ್ ಆಂಟನಿ ಹೋಲಿ ಕ್ರಾಸ್ ಬಿಲ್ಡಿಂಗ್ ಕಮಿಟಿ ಕಳೆದ 40 ವರ್ಷಗಳಿಂದ ಇದೆಯೆಂದು ಹೇಳಲಾಗುತ್ತಿದೆ. ಈ ನಡುವೆ ಈ ಪ್ರಾರ್ಥನಾ ಮಂದಿರ ಹಾಗೂ ಅಲ್ಲಿಯೇ ಇರುವ ಸತ್ಯ ಕೋಡ್ದಬ್ಬು ದೈವಸ್ಥಾನದ ವ್ಯಾಜ್ಯವೊಂದು ನ್ಯಾಯಾಲಯದಲ್ಲಿದ್ದು, ತಡೆಯಾಜ್ಞೆ ಜಾರಿಯಲ್ಲಿದೆ. ಆದರೆ ಇತ್ತೀಚಿಗೆ ಕೋಡ್ದಬ್ಬು ಸೇವಾ ಸಮಿತಿಯ ಸದಸ್ಯರು ಪ್ರಾರ್ಥನಾ ಮಂದಿರವನ್ನು ಅತಿಕ್ರಮವಾಗಿ ಪ್ರವೇಶ ಮಾಡಿ ಕಂಪೌಂಡ್ ಗೋಡೆಯನ್ನು ನೆಲಸಮ ಮಾಡಿ ಅಲ್ಲಿನ ಮರಗಳನ್ನು ಹಾನಿಗೆಡವಿದ್ದಾರೆ. ಅಲ್ಲದೆ ಇದೇ ಕಂಪೌಂಡ್ ನೊಳಗೆ ನೇಮವನ್ನು ಮಾಡುವ ಬಗ್ಗೆ ಆಮಂತ್ರಣ ಪತ್ರಿಕೆಯನ್ನು ತಯಾರಿಸಿದ್ದಾರೆ ಎಂದು ಸೈಂಟ್ ಆ್ಯಂಟನಿ ಹೋಲಿ ಕ್ರಾಸ್ ಬಿಲ್ಡಿಂಗ್ ಕಮಿಟಿ ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ.

Edited By : Nagesh Gaonkar
PublicNext

PublicNext

06/02/2022 08:16 pm

Cinque Terre

46.11 K

Cinque Terre

5

ಸಂಬಂಧಿತ ಸುದ್ದಿ