ಬ್ರಹ್ಮಾವರ: ತಮಗೆ ಅವಾಚ್ಯ ಶಬ್ದಳಿಂದ ಬೈದು ,ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾಗಿ ಶಿರಿಯಾರ ಗ್ರಾಮದ ಸಂತೋಷ ಪಾಣ (42) ಎಂಬವರು ದೂರು ಕೋಟ ಠಾಣೆಯಲ್ಲಿ ದೂರು ನೀಡಿದ್ದಾರೆ. ಶಿರಿಯಾರ ಪಂಚಾಯತ್ ಅಧ್ಯಕ್ಷ ಸುಧೀಂದ್ರ ಶೆಟ್ಟಿ ಮತ್ತು ನಾಗರಾಜ ಶೆಟ್ಟಿ ಆರೋಪಿಗಳಾಗಿದ್ದಾರೆ.
ಆರೋಪಿಗಳು ತಮ್ಮ ರಿಕ್ಷಾವನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿದ್ದಾರೆ. ಸುಧೀಂದ್ರ ಶೆಟ್ಟಿ ಮತ್ತು ನಾಗರಾಜ ಶೆಟ್ಟಿ ಇಬ್ಬರು ಸೇರಿ ರಿಕ್ಷಾದಿಂದ ಹೊರಗೆ ಎಳೆದು" ನೀನು ಕೋಲ ಕಟ್ಟುವ ಪಾಣ. ಕೀಳು ಜಾತಿಯವನು ಎಂದು ಬೈದು ಸಾರ್ವಜನಿಕವಾಗಿ ಜಾತಿ ನಿಂದನೆ ಮಾಡಿದ್ದಾರೆ.ಈ ವೇಳೆ ಸುಧೀಂದ್ರ ಶೆಟ್ಟಿ ಮರದ ದೊಣ್ಣೆಯಿಂದ ತಮ್ಮ ಬಲ ಕೈ ಹಾಗೂ ಎದೆಗೆ ಹೊಡೆದಿದ್ದಾರೆ.ಬಳಿಕ ಅವರಿಬ್ಬರೂ ಸೇರಿ ಎದೆ ಮತ್ತು ಹೊಟ್ಟೆಗೆ ಕಾಲಿನಿಂದ ತುಳಿದಿದ್ದಾರೆ.ಬಳಿಕ ಜೀವ ಬೆದರಿಕ ಹಾಕಿ ಹೋಗಿದ್ದಾಗಿ
ದೂರಿನಲ್ಲಿ ತಿಳಿಸಲಾಗಿದೆ.
ಸುದೀಂದ್ರ ಶೆಟ್ಟಿ ಶಿರಿಯಾರ ಪಂಚಾಯತ್ ವ್ಯಾಪ್ತಿಯಲ್ಲಿ ಅಕ್ರಮ ಮರಳು ತೆಗೆದು ಮನೆಯ ಬಳಿ ಸಂಗ್ರಹ ಮಾಡುತ್ತಿದ್ದು, ಈ ಬಗ್ಗೆ ಸಂತೋಷ್ ಪಾಣ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ಕೊಡುತ್ತಾರೆಂದು ಈ ಕೃತ್ಯ ಮಾಡಿರುವುದಾಗಿ ತಿಳಿದು ಬಂದಿದೆ. ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
04/02/2022 01:38 pm