ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾತ್ರೆ ಮಾರಾಟ ನೆಪದಲ್ಲಿ ಅತ್ಯಾಚಾರಕ್ಕೆ ಯತ್ನ : ಕಾಮುಕ ಅರೆಸ್ಟ್

ಮಂಗಳೂರು: ಓಮಸತ್ವ, ಕಸ್ತೂರಿ ಮಾತ್ರೆ ಮಾರಾಟ ಮಾಡುವ ನೆಪದಲ್ಲಿ ಕಾಮುಕನೋರ್ವನು ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ನಗರದ ಹೊರವಲಯದಲ್ಲಿರುವ ಕಂದಾವರ ಗ್ರಾಪಂನ ಕಜೆಪದವು ಎಂಬಲ್ಲಿನ ನಡೆದಿದೆ.ನಗರದ ಮುಲ್ಕಿಯ ಕೆಂಚನಕೆರೆ ನಿವಾಸಿ ಮೊಹಮದ್ ಇಕ್ಬಾಲ್ (52) ಅತ್ಯಾಚಾರಕ್ಕೆ ಯತ್ನಿಸಿರುವ ಆರೋಪಿ.

ಆರೋಪಿ ಮೊಹಮ್ಮದ್ ಇಕ್ಬಾಲ್ ನಿನ್ನೆ ಬೆಳಗ್ಗೆ 11 ಗಂಟೆಗೆ ನಗರದ ಕೊಳಂಬೆ ಗ್ರಾಮದ ಕಜೆಕೋಡಿ ಎಂಬಲ್ಲಿಗೆ ಓಮಸತ್ವ, ಕಸ್ತೂರಿ ಮಾತ್ರೆಗಳನ್ನು ಮಾರಾಟ ಮಾಡಲು ಬಂದಿದ್ದಾನೆ. ಈ ಸಂದರ್ಭ ಓರ್ವ ಮಹಿಳೆಯ ಕೈಹಿಡಿದು ಎಳೆದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ತಕ್ಷಣ ಸ್ಥಳೀಯರು ಮಹಿಳೆಯ ರಕ್ಷಣೆಗೆ ಆಗಮಿಸಿದ್ದಾರೆ.

ಮಹಿಳೆ ನೀಡಿದ ದೂರಿನನ್ವಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nirmala Aralikatti
Kshetra Samachara

Kshetra Samachara

04/02/2022 09:13 am

Cinque Terre

10.81 K

Cinque Terre

2

ಸಂಬಂಧಿತ ಸುದ್ದಿ