ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ವಾಹನ ಡಿಕ್ಕಿ ವಿಚಾರ, ವಾಗ್ವಾದ; ತಲವಾರು ತೋರಿಸಿ ಭೀತಿ ಸೃಷ್ಟಿ!

ಮಂಗಳೂರು: ತಂಡವೊಂದು ತಲವಾರು ಹಿಡಿದು ಕಾಲೇಜೊಂದರ ಬಳಿ ಸಾರ್ವಜನಿಕರಿಗೆ ಭೀತಿ ಹುಟ್ಟಿಸಿದ ಘಟನೆ ನಗರದ ಬಲ್ಲಾಳ್‌ ಬಾಗ್ ಸಮೀಪ ನಡೆದಿದೆ.

ವಾಹನಗಳ ನಡುವೆ ಡಿಕ್ಕಿ ಸಂಭವಿಸಿದ ವಿಚಾರದ ಬಗ್ಗೆ ವಿದ್ಯಾರ್ಥಿಗಳ ಮಧ್ಯೆ ವಾಗ್ವಾದ ನಡೆದಿತ್ತು. ಇದಾದ ಸ್ವಲ್ಪ ಸಮಯದ ನಂತರ ಯುವಕರ ತಂಡವೊಂದು ತಲವಾರು ಸಮೇತ ಕಾಲೇಜು ಬಳಿಗೆ ಧಾವಿಸಿ ಬಂದು, ಕೆಲವು ವಿದ್ಯಾರ್ಥಿಗಳಿಗಾಗಿ ಹುಡುಕಾಟ ನಡೆಸಿತ್ತು. ಈ ಬಗ್ಗೆ ಬರ್ಕೆ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಪೊಲೀಸರು ವಿಚಾರಣೆ ನಡೆಸುವುದಾಗಿ ತಿಳಿಸಿದ್ದಾರೆ.

Edited By : Shivu K
Kshetra Samachara

Kshetra Samachara

02/02/2022 05:55 pm

Cinque Terre

16.12 K

Cinque Terre

2

ಸಂಬಂಧಿತ ಸುದ್ದಿ