ಮುಲ್ಕಿ; ಕಿನ್ನಿಗೋಳಿ ಸಮೀಪದ ಪಟ್ಟೆ ಶಾಂಭವಿ ನದಿಯಲ್ಲಿ ಸೋಮವಾರ ಅಕ್ರಮ ಮರಳುಗಾರಿಕೆಗೆ ದಾಳಿ ನಡೆಸಿದ ಅಧಿಕಾರಿಗಳು ರಾತ್ರಿ 12 ಗಂಟೆ ವರೆಗೆ ದಾಳಿ ಪ್ರಕ್ರಿಯೆಯಲ್ಲಿಯೇ ತೊಡಗಿದ್ದರು, ಸಂಜೆ ಸುಮಾರು 4.30 ಕ್ಕೆ ದಾಳಿ ನಡೆಸಿದ ಅಧಿಕಾರಿಗಳು ಗ್ರಾಮಸ್ಥರ ಸಹಕಾರದಿಂದ ಮರಳುಗಾರಿಕೆಗೆ ಬಳಸುತ್ತಿದ್ದ ಒಟ್ಟು 5 ದೋಣಿಗಳನ್ನು ವಶ ಪಡಿಸಿಕೊಂಡಿದ್ದಾರೆ, 8 ಗಂಟೆಯಾದೊಡನೆ ಕೆಲ ಗಣಿ ಮಾಲಿಕರು ಸ್ಥಳಕ್ಕೆ ಆಗಮಿಸಿದ್ದು ಗ್ರಾಮಸ್ಥರ ಮತ್ತು ಗಣಿ ಮಾಲಿಕರ ಮಧ್ಯೆ ಮಾತಿನ ಚಕಮಕಿ ನಡೆದಿದೆ.
ರಾತ್ರಿ 12 ಗಂಟೆವರೆಗೆ ಅಧಿಕಾರಿಗಳು ಸ್ಥಳದಲ್ಲೇ ಇದ್ದು ದೋಣಿಗಳನ್ನು ವಶಪಡಿಸಿಕೊಂಡಿದ್ದು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ನಡುವೆ ಕೆಲ ಮರಳು ಮಾಫಿಯಾದ ಉದ್ಯಮಿಗಳು ಅಧಿಕಾರಿಗಳ ಜೊತೆ ಲಾಬಿ ನಡೆಸಿ ಮತ್ತೆ ಮರಳುಗಾರಿಕೆ ಆರಂಭಿಸುವ ಬಗ್ಗೆ ಸ್ಥಳದಲ್ಲಿ ಸುದ್ದಿಯಾಗಿದ್ದು ಕೂಡಲೇ ಜಿಲ್ಲಾಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಅಕ್ರಮ ಗಣಿಗಾರಿಕೆಗೆ ಪರವಾನಿಗೆ ನೀಡ ಬಾರದು ಎಂದು ಆಗ್ರಹಿಸಿದ್ದಾರೆ.
Kshetra Samachara
25/01/2022 09:56 pm