ಸುಳ್ಯ ಹಾಗೂ ಮಡಿಕೇರಿಯ ಗಡಿ ಪ್ರದೇಶವಾದ ಸಂಪಾಜೆ ಗೇಟಿನಲ್ಲಿ ವಾಹನ ತಪಾಸಣೆ ಸಂದರ್ಭ ಈಚರ್ ಲಾರಿಯೊಂದರಲ್ಲಿ 25 ಕ್ಕೂ ಹೆಚ್ಚು ದನಗಳು ಪತ್ತೆಯಾದ ಘಟನೆ ಜನವರಿ 25ರಂದು ವರದಿಯಾಗಿದೆ.
ರಾತ್ರಿ ಮಡಿಕೇರಿ ಕಡೆಯಿಂದ ಈಚರ್ ಲಾರಿಯಲ್ಲಿ ದನಗಳನ್ನು ತುಂಬಿಕೊಂಡು ಬರಲಾಗಿತ್ತು. ಸಂಪಾಜೆ ಗೇಟಿನಲ್ಲಿ ಸಿಬ್ಬಂದಿಗಳು ವಿಚಾರಣೆ ನಡೆಸಿದಾಗ ಇದು ದನದ ಫುಡ್ ಸಾಗಾಟ ಎಂದು ಚಾಲಕ ಹೇಳಿದನೆಂದೂ ಗೇಟಿನ ಸಿಬ್ಬಂದಿಗಳಿಗೆ ಅನುಮಾನ ಬಂದು ಲಾರಿಯ ಒಳಗೆ ಇಣುಕಿ ನೋಡಿದಾಗ ದನದ ಫುಡ್ ನ ಜತೆಗೆ 25 ಕ್ಕೂ ಹೆಚ್ಚು ದನಗಳು ಕಂಡು ಬಂದವು. ಚಾಲಕನನ್ನು ಮತ್ತಷ್ಟು ಪ್ರಶ್ನೆ ಮಾಡಿದಾಗ ಆತ ಹಾಗೂ ಈಚರ್ ಗಾಡಿಯಲ್ಲಿದ್ದ ಮತ್ತೊಬ್ಬ ಓಟಕ್ಕಿತ್ತರು.
ಇದೀಗ ಲಾರಿ ಸಂಪಾಜೆ ಗೇಟಿನಲ್ಲಿದ್ದು, ಇದು ಎಲ್ಲಿಂದ ಬರುತ್ತಿತ್ತು ಮತ್ತು ಎಲ್ಲಿಗೆ ಕೊಂಡೊಯ್ಯಲಾಗುತ್ತಿತ್ತೆಂದು ಎಂಬುದರ ಬಗ್ಗೆ ಇಲಾಖೆಯವರು ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
Kshetra Samachara
25/01/2022 10:39 am