ಸುಳ್ಯ: ಪೈಚಾರು ಬಳಿ ಯುವಕರ ನಡುವೆ ಹೊಡೆದಾಟವಾಗಿ ಕಾರು ಜಖಂಗೊಳಿಸಲಾದ ಹಾಗೂ ಭಜರಂಗ ದಳದ ಯುವಕರು ಮಧ್ಯಪ್ರವೇಶಿಸಿ ರಾಜಿ ಮಾತುಕತೆ ನಡೆಸಿದ ಘಟನೆ ವರದಿಯಾಗಿದೆ.
ರಕ್ಷಿತ್ ಎಂಬ ಯುವಕ ಶಾಲಾ ಬಾಲಕಿಯೊಬ್ಬಳನ್ನು ಪುತ್ತೂರಿನಿಂದ ಆಕೆಯ ಮನೆಗೆ ಬಿಡಲೆಂದು ಕಾರಲ್ಲಿ ಕರೆತಂದನೆಂದೂ, ಇದನ್ನು ವಿರೋಧಿಸಿ ಸಾತ್ವಿಕ್ ಎಂಬ ಯುವಕ ಮತ್ತು ಮನೆಯವರು ರಿಕ್ಷಾ ಚಾಲಕನಿಗೂ, ಕರೆತಂದ ಯುವಕನಿಗೂ ಹಲ್ಲೆ ನಡೆಸಿದರೆಂದೂ ಘಟನೆ ವರದಿಯಾಗಿದೆ.
ಬಳಿಕ ಎರಡೂ ಕಡೆಯವರು ಸುಳ್ಯ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಹೋದರು. ಎರಡೂ ಕಡೆಯವರು ಭಜರಂಗದಳದಲ್ಲಿದ್ದವರಾದುದರಿಂದ ಭಜರಂಗ ದಳದ ವರ್ಷಿತ್ ಮತ್ತಿತರರು ಮಧ್ಯಪ್ರವೇಶಿಸಿ, ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥಗೊಳಿಸಲು ಪ್ರಯತ್ನಿಸಿರುವುದಾಗಿ ತಿಳಿದು ಬಂದಿದೆ.
ರಕ್ಷಿತ್ ಮೇಲೆ ಪೋಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ರಕ್ಷಿತ್ ನೀಡಿದ ದೂರು ದಾಖಲಾಗಿಲ್ಲವೆಂದು ಹೇಳಲಾಗಿದೆ.
Kshetra Samachara
24/01/2022 05:12 pm