ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಟ್ಲ: "ಪ.ಪಂ. ಸಿಬ್ಬಂದಿ ಮೇಲೆ ಲಂಚ ಆರೋಪ ಮಾಡಿದ ಮಾಜಿ ಸದಸ್ಯನ ಬಂಧಿಸಿ"

ವಿಟ್ಲ: ವಿಟ್ಲ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಶ್ರೀಕೃಷ್ಣ ಅವರು ಪಂಚಾಯತ್ ಸಿಬ್ಬಂದಿ ಮೇಲೆ ಲಂಚದ ಸುಳ್ಳು ಆರೋಪ ಮಾಡುವ ಮೂಲಕ ದಲಿತರನ್ನು ಎತ್ತಿ‌ ಕಟ್ಟುವ ಕೆಲಸ ಮಾಡಿದ್ದು, ಖಂಡನೀಯ ಎಂದು ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ ಬಿ.ಕೆ. ಸೇಸಪ್ಪ ಬೆದ್ರಕಾಡು ಹೇಳಿದರು.

ವಿಟ್ಲದಲ್ಲಿ ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿ ಮತ್ತು‌ ದ.ಕ. ಜಿಲ್ಲಾ ಪೌರಕಾರ್ಮಿಕ ಸಂಘ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಜೇಶ್ ಲಂಚ ಕೇಳಿದ್ದರೆ ನೇರವಾಗಿ ಎಸಿಬಿಗೆ ದೂರು ನೀಡಬಹುದಿತ್ತು. ಅದನ್ನು ಬಿಟ್ಟು ವಿವಿಧ ಇಲಾಖೆಗೆ ಪತ್ರ ಬರೆಯುವ ಅವಶ್ಯಕತೆ ಇರಲಿಲ್ಲ ಮತ್ತು ಅಪಪ್ರಚಾರ ಮಾಡುವ ಅವಶ್ಯಕತೆಯೂ ಇರಲಿಲ್ಲ.‌ ಭಾಸ್ಕರ್ ಎಂಬ ಮುಗ್ಧನನ್ನು ಬಳಸಿಕೊಂಡು ಆರೋಪಿ ಶ್ರೀಕೃಷ್ಣ ಇಲ್ಲಸಲ್ಲದ ಆರೋಪ ಮಾಡಿರುವ ಘಟನೆಯನ್ನು ಖಂಡಿಸುತ್ತೇವೆ. ತಕ್ಷಣವೇ ಶ್ರೀಕೃಷ್ಣರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.‌

ದ.ಕ. ಜಿಲ್ಲಾ ಪೌರಕಾರ್ಮಿಕ ಸಂಘದ ಅಧ್ಯಕ್ಷ ಬಿ.ಕೆ. ಅಣ್ಣು ಕೆರೆಕಾಡು ಮಾತನಾಡಿ, ಇಂತಹ ಘಟನೆಯನ್ನು ನಾವು ಖಂಡಿಸುತ್ತೇವೆ. ತಕ್ಷಣ ಈ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ, ರಾಜೇಶ್ ಅವರಿಗೆ ನ್ಯಾಯ ಒದಗಿಸಬೇಕು ಎಂದರು.

ದ.ಕ. ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಯು., ಅಶೋಕ್ ಚಂದಳಿಕೆ, ಸೋಮಪ್ಪ ಸುರುಳಿಮೂಲೆ ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

22/01/2022 06:45 pm

Cinque Terre

9.15 K

Cinque Terre

1

ಸಂಬಂಧಿತ ಸುದ್ದಿ