ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು:ದರೋಡೆ ಪ್ರಕರಣದಲ್ಲಿ ಕುಖ್ಯಾತ ಕ್ರಿಮಿನಲ್ ಆಕಾಶ ಭವನ ಶರಣ್ ಸೇರಿದಂತೆ ಐವರ ಬಂಧನ

ಮಂಗಳೂರು: ನಗರದ ಚೇಳಾರು ಸಮೀಪ ನಡೆದಿರುವ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಖ್ಯಾತ ಕ್ರಿಮಿನಲ್ ಸೇರಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ‌.

ಕಾವೂರು, ಆಕಾಶಭವನ ನಿವಾಸಿ ಶರಣ್ ಆಕಾಶಭವನ(38), ಕಂಕನಾಡಿ ನಿವಾಸಿ ಅನಿಲ್ ಕುಮಾರ್ ಸಾಲ್ಯಾನ್(40), ಬಜ್ಪೆ ನಿವಾಸಿ ಸೈನಾಲ್ ಡಿ ಸೋಜಾ, ಪ್ರಾಯ(22), ಬಂಟ್ವಾಳ, ಫರಂಗಿಪೇಟೆ ನಿವಾಸಿ ಪ್ರಸಾದ್(39), ಜೆಪ್ಪಿನಮೊಗರು ನಿವಾಸಿ ಚೇತನ್ ಕೊಟ್ಟಾರಿ, ಪ್ರಾಯ(35) ಬಂಧಿತ ಆರೋಪಿಗಳು. ಆರೋಪಿಗಳು ಡಿಸೆಂಬರ್ 8ರಂದು ರಾತ್ರಿ 11 ಗಂಟೆ ಸುಮಾರಿಗೆ ಚೇಳಾರು ನಂದಿನಿ ಬ್ರಿಡ್ಜ್ ಬಳಿ ವ್ಯಕ್ತಿಯೋರ್ವನನ್ನು ತಡೆದು ಹಲ್ಲೆ ನಡೆಸಿ ಮೊಬೈಲ್, 3 ಸಾವಿರ ರೂ. ಹಣ, ದ್ವಿಚಕ್ರ ವಾಹನವನ್ನು ಡಕಾಯಿತಿ ಮಾಡಿದ್ದರು. ಇವರು ರೌಡಿ ಶೀಟರ್ ಆಗಿರುವ ವ್ಯಕ್ತಿಯೋರ್ವನನ್ನು ಹಲ್ಲೆ ಮಾಡಲು ಬೇಕಾಗಿ ಹಾಗೂ ಹಣದ ಅವಶ್ಯಕತೆಗಾಗಿ ಈ ದರೋಡೆ ಮಾಡಿದ್ದಾರೆ ಎಂದು ಪೊಲೀಸ್ ತನಿಖೆಯಿಂದ ಬಯಲಾಗಿದೆ.

ಇವರಲ್ಲಿ ಆಕಾಶಭವನ ಶರಣ್ ಮೇಲೆ 22 ಪ್ರಕರಣ ದಾಖಲಾಗಿದ್ದು, ಕಳೆದ 2 ತಿಂಗಳ ಹಿಂದೆಯಷ್ಟೇ ಜೈಲಿನಿಂದ ಹೊರಬಂದಿದ್ದ. ಆ ಬಳಿಕ ಈತ ದಕ್ಷಿಣ ಕನ್ನಡ, ಉಡುಪಿ ಹಾಗೂ ಬೆಂಗಳೂರು ಕಡೆಗಳಲ್ಲಿ ಓಡಾಟ ಮಾಡಿಕೊಂಡು ಪೊಲೀಸರ ಕೈಗೆ ಸಿಗದೆ ನಾಪತ್ತೆಯಾಗಿದ್ದ. ಆರೋಪಿಗಳು ದರೋಡೆಗೈದ ಮೊಬೈಲ್ ನ ಜಾಡು ಹಿಡಿದು ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ಇಂದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಮತ್ತೆ ಪೊಲೀಸ್ ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ತಿಳಿಸಿದ್ದಾರೆ.

Edited By :
Kshetra Samachara

Kshetra Samachara

14/01/2022 02:42 pm

Cinque Terre

9.85 K

Cinque Terre

0

ಸಂಬಂಧಿತ ಸುದ್ದಿ