ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: 2.50 ಲಕ್ಷ ಲಂಚ ಪಡೆಯುತ್ತಿದ್ದಾಗಲೇ ಮೂವರು ಅಧಿಕಾರಿಗಳು ಎಸಿಬಿ ಬಲೆಗೆ

ಉಡುಪಿ: ಉಡುಪಿಯಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ಲಂಚ ಸಮೇತ ಮೂವರನ್ನು ವಶಕ್ಕೆ ಪಡೆದಿದ್ದಾರೆ.

ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು, ಇಂಜಿನಿಯರ್ ಗುರುಪ್ರಸಾದ್, ನಯೀಮಾ ಸಯೀದ್ ಮತ್ತು ಪ್ರಸಾದ್ ಎಂಬವರನ್ನು ವಶಕ್ಕೆ ಪಡೆದಿದ್ದಾರೆ.

ಈ ಮೂವರು 2.50 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳು ಬಲೆಗೆ ಕೆಡವಿದ್ದಾರೆ. ವಾಣಿಜ್ಯ ಉದ್ದೇಶಕ್ಕೆ ಪರವಾನಿಗೆ ಕೊಡುವ ವಿಚಾರಕ್ಕೆ ಲಂಚ ಪಡೆಯುತ್ತಿದ್ದರು.

ಎಸಿಬಿ ಎಸ್ ಪಿ ಸೈಮನ್, ಡಿವೈಎಸ್ ಪಿ ಮಂಜುನಾಥ ಕವರಿ, ಎಸಿಬಿ ಎಸ್ ಐ ಸತೀಶ್, ರಫೀಕ್ ಎಂ. ಅವರು ಎಸಿಬಿ ತಂಡದಲ್ಲಿದ್ದರು.

Edited By : Manjunath H D
PublicNext

PublicNext

13/01/2022 05:25 pm

Cinque Terre

57.68 K

Cinque Terre

4

ಸಂಬಂಧಿತ ಸುದ್ದಿ